ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ರೋಗಿಗಳ ಚಿಕಿತ್ಸೆಯಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ಪಡೆಯುವ ವೈದ್ಯರ ಸೇವೆ ಶ್ಲಾಘನೀಯ

ಮುಲ್ಕಿ: "ವೈದ್ಯೋ ನಾರಾಯಣ ಹರಿ" ಎಂಬಂತೆ ಮನುಕುಲದ ಉನ್ನತಿಗಾಗಿ ಜೀವದ ಹಂಗು ತೊರೆದು ವೈಯುಕ್ತಿಕ ಸಮಸ್ಯೆಗಳನ್ನು ಬದಿಗಿರಿಸಿ ಎದೆಗುಂದದೆ ರೋಗಿಗಳ ಚಿಕಿತ್ಸೆಯಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ಪಡೆಯುವ ವೈದ್ಯರ ಸೇವೆ ಶ್ಲಾಘನೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು "ರಾಷ್ಟ್ರೀಯ ವೈದ್ಯ ದಿನಾಚರಣೆ" ಪ್ರಯುಕ್ತ ಮುಲ್ಕಿಯ ಪ್ರಸಿದ್ಧ ದಂತ ವೈದ್ಯ ಡಾ. ಚಂದ್ರಶೇಖರ್ ಬಲೆಪು ರವರನ್ನು ತಮ್ಮ ಆಶ್ರಮದಲ್ಲಿ ಗೌರವಿಸಿ ಮಾತನಾಡಿ ಕೊರೊನಾ ದಿನಗಳಲ್ಲಿ ಹಗಲಿರುಳು ಎನ್ನದೆ ರೋಗಿಗಳ ಪ್ರಾಣ ಉಳಿಸಲು ವೈದ್ಯರುಗಳು ಪಟ್ಟ ಶ್ರಮ ಅಭಿನಂದನೀಯ ಎಂದರು.

ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ. ಭಟ್ ರಾಹುಲ್ ಸಿ. ಭಟ್, ಸಂಚಾಲಕ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/07/2022 01:09 pm

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ