ಸುರತ್ಕಲ್: ಸುರತ್ಕಲ್ ಪರಿಸರದಲ್ಲಿ ಗುರುವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ ಎಂ ಆರ್ ಪಿ ಎಲ್ ಮುಖ್ಯ ರಸ್ತೆ ಕಾನದಲ್ಲಿ ಚರಂಡಿ ಅವ್ಯವಸ್ಥೆಯಿಂದ ಮಳೆಗೆ ಕೃತಕ ನೆರೆ ಉಂಟಾಗಿ ಸಂಚಾರ ತ್ರಾಸದಾಯಕವಾಗಿ ಪರಿಣಮಿಸಿತು.
ಭಾರಿ ಮಳೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ವಾಹನ ಸವರಾರು ಪರದಾಡುವಂತಯಿತು.
ಈ ನಡುವೆ ರಸ್ತೆ ಮಧ್ಯೆ ರಿಕ್ಷಾ ಕೆಟ್ಟು ಹೋಗಿದ್ದು ವಾಹನ ಅಸ್ತ ವ್ಯಸ್ತಗೊಂಡಿತು. ಸಂಜೆಯವರೆಗೆ ಮಳೆ ಸುರಿದರೆ ಮತ್ತಷ್ಟು ವಾಹನ ಸಂಚಾರ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದು ಕೂಡಲೇ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
Kshetra Samachara
30/06/2022 11:10 am