ಮುಲ್ಕಿ: ಮುಲ್ಕಿ ಸುರತ್ಕಲ್ ವಲಯದ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ರವರು ಕರ್ತವ್ಯವದಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಕುಂಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜ ಮಾತನಾಡಿ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೃಷಿ ಪ್ರಧಾನ ಗ್ರಾಮವಾಗಿದ್ದು ಗ್ರಾಮದ ಪ್ರತಿಯೊಬ್ಬ ಕೃಷಿಕನಿಗೂ ಮಾಹಿತಿ ನೀಡಿ ಕೃಷಿಗೆ ಪ್ರೋತ್ಸಾಹ ನೀಡಿದ್ದ ಅಧಿಕಾರಿ ಅಬ್ದುಲ್ ಬಶೀರ್ ಕಾರ್ಯ ವೈಖರಿ ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಆನಂದ, ಮಾಜೀ ಅಧ್ಯಕ್ಷ ದಿನೇಶ್ ಪುತ್ರನ್, ಸದಸ್ಯರಾದ ನವೀನ್ ಶೆಟ್ಟಿ, ಶಾಂತ, ಸುಜಾತ, ನವೀನ್ ಕೋಟ್ಯಾನ್, ಮರಿನಾ, ಪ್ರಶಾಂತ, ವನಜ, ಗೀತಾ, ಸುರೇಖಾ , ಮೂಡಬಿದ್ರೆ ವಲಯದ ಶಿಕ್ಷಣಾಧಿಕಾರಿ ನಿತ್ಯಾನಂದ,ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/06/2022 07:17 am