ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಶಿಮಂತೂರು ರಸ್ತೆ ಜಂಕ್ಷನ್ ಬಳಿ ಕಟ್ಟಡ ಕಾಮಗಾರಿಗೆ ಮಣ್ಣು ತೆಗೆಯುತ್ತಿದ್ದು ಕಿನ್ನಿಗೊಳಿ ಗುತ್ತಕಾಡು ರಸ್ತೆ ಕೆಸರುಮಯ ವಾಗಿ ಸಂಚಾರ ದುಸ್ತರವಾಗಿದೆ.
ಕಳೆದ ಎರಡು ದಿನಗಳಿಂದ ನಿರಂತರ ಕಾಮಗಾರಿ ನಡೆಯುತ್ತಿದ್ದು ಟಿಪ್ಪರ್ ಮೂಲಕ ಮಣ್ಣು ಸಾಗಾಟದ ವೇಳೆ ನಿಯಮಗಳನ್ನು ಗಾಳಿಗೆ ತೂರಿ ಕಿನ್ನಿಗೋಳಿ ಗುತ್ತಕಾಡು ಪ್ರಧಾನ ಕಾಂಕ್ರೀಟ್ ರಸ್ತೆ ಕೆಸರು ಮಯವಾಗಿ ದ್ವಿಚಕ್ರ ವಾಹನ ಸಂಚಾರ ಸಹಿತ ಪಾದಚಾರಿಗಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ.
ಈ ಬಗ್ಗೆ ಕೂಡಲೇ ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗಮನಹರಿಸಿ ಕಾಮಗಾರಿಯ ಅವೈಜ್ಞಾನಿಕ ಮಣ್ಣು ಸಾಗಾಟವನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
24/06/2022 02:10 pm