ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆರಿವೆಲ್ ಶಾಲೆಯ ಬಳಿಯಿಂದ ದಾಮಸ್ಕಟ್ಟೆ ಗೆ ಹೋಗುವ ತೊಡಮ ಕ್ರಾಸ್ ಜಂಕ್ಷನ್ ಬಳಿ ರಸ್ತೆಯಲ್ಲಿ ಅಪಾಯಕಾರಿ ಹೊಂಡವಿದ್ದು ಪ್ರಯಾಣ ದುಸ್ತರವಾಗಿದೆ.
ಈ ರಸ್ತೆ ಜಂಕ್ಷನ್ ಬಳಿ ವಾಹನಗಳ ಅತಿ ವೇಗ ಸಂಚಾರ ನಿಯಂತ್ರಿಸಲು ಉಬ್ಬುತಗ್ಗು ನಿರ್ಮಿಸಿದ್ದು, ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಯಲ್ಲಿ ನೀರು ನಿಂತು ಹೊಂಡಮಯವಾಗಿದೆ.
ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆ ಜಂಕ್ಷನ್ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
23/06/2022 02:32 pm