ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು:ರಾಷ್ಟ್ರೀಯ ಹೆದ್ದಾರಿ ಕಿರುಸೇತುವೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಲು ಆಗ್ರಹ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಕಿರುಸೇತುವೆ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಕೃತಕ ನೆರೆ ಉಂಟಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಹಳೆಕಾಲದ ಕಿರುಸೇತುವೆ ಬಳಿಯಲ್ಲಿ ಈಗಾಗಲೇ ಮೊದಲ ಮಳೆಗೆ ಹೊಂಡಗಳು ಉಂಟಾಗಿದ್ದು ಸಣ್ಣಪುಟ್ಟ ವಾಹನಗಳಿಗೆ ಸಂಚಾರ ದುಸ್ತರವಾಗಿದೆ.

ಕೂಡಲೇ ಹೆದ್ದಾರಿ ಇಲಾಖೆ ಎಚ್ಚೆತ್ತು ಹೆದ್ದಾರಿ ಬದಿ ನೀರು ಸರಾಗ ಹರಿದುಹೋಗುವಂತೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ಶೆಟ್ಟಿಗಾರ್ ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/06/2022 03:11 pm

Cinque Terre

1.83 K

Cinque Terre

0

ಸಂಬಂಧಿತ ಸುದ್ದಿ