ಸುರತ್ಕಲ್: ಸಮೀಪದ ಇಡ್ಯಾ ಪೂರ್ವ 6ನೇ ವಾರ್ಡಿನ ಕಾನ ಅಂಬೇಡ್ಕರ್ ಕಾಲನಿಯ 1 ಕೋಟಿ 45 ಲಕ್ಷ 75 ಸಾವಿರ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ವೈ ಶೆಟ್ಟಿಯವರು ನೆರವೇರಿಸಿದರು.
ಸ್ಥಳೀಯ ಮ. ನ. ಪಾ ಸದಸ್ಯೆ ಶ ಸರಿತಾ ಶಶಿಧರ್, ಉಪ ಮಹಾಪೌರರಾದ ಸುಮಂಗಲ ರಾವ್, ಮ . ನ. ಪಾ ಸದಸ್ಯರಾದ ವೇದಾವತಿ, ಸುಮಿತ್ರ, ಮಂಡಲ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ದಿನಕರ್ ಇಡ್ಯಾ, ಶಕ್ತಿಕೇಂದ್ರ ಪ್ರಮುಖ್ ಶಶಿಧರ್ ಕಟ್ಲ, ರಾಜೇಶ್ ಮುಕ್ಕ ಬೂತ್ ಅಧ್ಯಕ್ಷರು ಸುಜಿತ್ ಕಾನ, ಬಿಜೆಪಿ ಪ್ರಮುಖರಾದ ಸುಲತಾ, ಹರಿಪ್ರಸಾದ್, ಉಮೇಶ್ ಕಾನ, ಸುಂದರ್ ಕಾನ, ಸುಜಾತ, ಕಟ್ಲ ಕೊರಗಜ್ಜ ಗುಡಿಯ ಶಂಕರ್ ಇನ್ನಿತರ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
14/06/2022 12:40 pm