ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು:"ಅಸಹಾಯಕರಿಗೆ ಸಹಾಯ ಹಸ್ತ ಜನ ಪ್ರತಿನಿಧಿಗಳ ಕರ್ತವ್ಯ": ವಿನೋದ್ ಸಾಲ್ಯಾನ್

ಮುಲ್ಕಿ:ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು 1 ನೇ ವಾರ್ಡಿನ ಯೋಗ ಧಾಮ ಬಳಿಯ ಎಲ್ಲಪ್ಪ ಪೂಜಾರಿ (ಪಾರ್ಶ್ವವಾಯು ವಿನಿಂದ ಹಾಸಿಗೆ ಹಿಡಿದ) ರವರ ಮನೆಗೆ ಸ್ಥಳೀಯ ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು ತೆರಳಿ ಸಂಧ್ಯಾ ಸುರಕ್ಷಾ ಯೋಜನೆಯ ಅರ್ಜಿಗಳನ್ನು ಭರ್ತಿ ಮಾಡಿ ಪಡುಪಣಂಬೂರು ಗ್ರಾಮಕರಣಿಕರ ವಿಶೇಷ ಮುತುವರ್ಜಿ ಮತ್ತು ಮುಲ್ಕಿ ತಹಶೀಲ್ದಾರರ ಮುಖಾಂತರ ಕರ್ನಾಟಕ ಸರಕಾರದ ಜನಪ್ರಿಯ ಯೋಜನೆ ಸಂಧ್ಯಾ ಸುರಕ್ಷಾ ಯೋಜನೆಯನ್ನು ಮಂಜೂರು ಮಾಡಲಾಯಿತು.

ಈ ಸಂದರ್ಭ ವಿನೋದ್ ಸಾಲ್ಯಾನ್ ಮಾಧ್ಯಮದ ಜೊತೆ ಮಾತನಾಡಿ ಸರಕಾರದ ಸವಲತ್ತುಗಳನ್ನು ಬಡವರಿಗೆ ದುರ್ಬಲ ವರ್ಗದವರಿಗೆ ಅಸಹಾಯಕರಿಗೆ ತಲುಪಿಸುವುದು ಪಂಚಾಯತ್ ಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

08/06/2022 01:59 pm

Cinque Terre

1.32 K

Cinque Terre

0

ಸಂಬಂಧಿತ ಸುದ್ದಿ