ಮುಲ್ಕಿ: ಪಕ್ಷಿಕೆರೆ ಸಮಿಪದ ಕೆಮ್ರಾಲ್ ಗ್ರಾಮ ಪಂಚಾಯತ್ ವತಿಯಿಂದ ಕೊಯಿಕುಡೆ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು.
ಕೆಮ್ರಾಲ್ ಗ್ರಾ.ಪಂ ಅಧ್ಯಕ್ಷೆ ಲೀಲಾ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಅಭಿನಂದನೀಯ ಎಂದರು.
ಕೆಮ್ರಾಲ್ ಗ್ರಾ ಪಂ ಸದಸ್ಯ ಹರಿಪ್ರಸಾದ್, ಕಾರ್ಯದರ್ಶಿ ಹರಿಶ್ಚಂದ್ರ, ಉದ್ಯಮಿಗಳಾದ ಪ್ರವೀಣ್ ಬೊಳ್ಳೂರು, ಅನಿಲ್ ಅಮೀನ್, ನವೀನ್‌ಕುಮಾರ್ ಪೂಜಾರಿ, ಚಂದ್ರಶೇಖರ ಪೂಜಾರಿ, ಶಾಲಾ ಸಿಆರ್‌ಪಿ ಜ್ಯೋತಿ, ಎಸ್‌ಡಿಎಂಸಿ ಅಧ್ಯಕ್ಷೆ ಯಶೋಧಾ, ಶಾಲಾ ಸಹ ಶಿಕ್ಷಕರಾದ ಮಹಮ್ಮಾಯಿ, ವಿನೋದಾ, ಭಾನುಮತಿ, ಜಯಲಕ್ಷ್ಮೀ, ಶಾಲಾ ವಿದ್ಯಾರ್ಥಿ ನಾಯಕ ಆಸಿಫ್, ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಕೆಮ್ರಾಲ್ ಗ್ರಾಪಂ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಸ್ವಾಗತಿಸಿದರು, ಶಾಲಾ ಮುಖ್ಯ ಶಿಕ್ಷಕಿ ವೀಣಾಕುಮಾರಿ ವಂದಿಸಿದರು ಲೆಕ್ಕಾಧಿಕಾರಿ ಕೇಶವ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಪರಿಸರ ಉಳಿಸಿ ಜಾಥಾ ನಡೆಯಿತು.
Kshetra Samachara
06/06/2022 08:27 pm