ಸುರತ್ಕಲ್ :ಕೈಗಾರಿಕೆಗಳು ತನ್ನ ಲಾಭಾಂಶದ ಸ್ವಲ್ಪ ಪ್ರಮಾಣವನ್ನು ಸ್ಥಳೀಯ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನೀಡಿ ಸಹಕಾರ ನೀಡಬೇಕು ಎಂದು ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ ಹೇಳಿದರು.
ಅವರು ಹಳೆಯಂಗಡಿ ಸಮೀಪದ ಚೇಳೈರು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾ ಕಟ್ಟಡ ಮತ್ತು ಸಭಾಭವನವನ್ನು ಎಂ,ಅರ್,ಪಿ,ಎಲ್ ಸಂಸ್ಥೆಯ ಸಿ,ಎಸ್,ಅರ್,ವಿಭಾಗದ ವತಿಯಿಂದ ಸುಮಾರು 51-75 ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಕೈಗಾರಿಕೆಗಳು ಸುತ್ತಲಿನ ಸ್ಥಳೀಯ ಪಂಚಾಯತ್ ನ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ನೀಡಬೇಕಾಗಿದ್ದು ಈ ನಿಟ್ಟಿನಲ್ಲಿ ಎಂ,ಅರ್,ಪಿ,ಎಲ್ ಸಂಸ್ಥೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಉದ್ಘಾಟನೆಯನ್ನು ನೆರವೇರಿಸಿದ ಎಂ,ಅರ್,ಪಿ,ಎಲ್ ಸಂಸ್ಥೆಯ ಸಿ,ಎಸ್,ಅರ್ ವಿಭಾಗದ ಸಿನಿಯರ್ ಮ್ಯಾನೇಜರ್ ನಾಗರಾಜ್ ರಾವ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಎಂ,ಅರ್,ಪಿ,ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ವೀಣಾ ಶೆಟ್ಟಿ, ಚೇಳೈರು ಗ್ರಾ ಪಂ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ,ಮೂಡಾ ಸದಸ್ಯ ಜಯಾನಂದ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಜಿ ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ,ತಾ ಪಂ ಮಾಜಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ ಚೇಳೈರು ಗ್ರಾ ಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ , ಪಂ. ಸದಸ್ಯರಾದ ಸುಧಾಕರ ಶೆಟ್ಟಿ, ಚೇಳೈರು ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಚಂದ್ರನಾಥ್ ಉಪಸ್ಥಿತರಿದ್ದರು.
Kshetra Samachara
03/06/2022 06:32 pm