ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕಾರ್ನಾಡು ಗಾಂಧಿ ಮೈದಾನದ ಬಳಿಯ ಕಾಂಕ್ರೀಟ್ ರಸ್ತೆ ಕೊನೆಗೊಳ್ಳುವ ಲ್ಲಿ ಬೃಹದಾಕಾರದ ಹೊಂಡ ಉಂಟಾಗಿದ್ದು ಈ ಬಗ್ಗೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರು ದುರಸ್ತಿಯಾಗಿರಲಿಲ್ಲ.
ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿ ಬಗ್ಗೆ ಮಾಹಿತಿ ಪಡೆದ ಆಟೋ ಚಾಲಕ ಹಾಗೂ ಕಿಲ್ಪಾಡಿ ಗ್ರಾಪಂ ಮಾಜೀ ಸದಸ್ಯ ಶರೀಫ್ ಕೂಡಲೇ ಕಾರ್ಯಪ್ರವೃತ್ತರಾಗಿ ತಾವೇ ಹೊಂಡಗಳನ್ನು ಮುಚ್ಚಿ ಇಲಾಖೆ ಅಧಿಕಾರಿಗಳಿಗೆ ಸೆಡ್ಡು ಹೊಡೆದಿದ್ದಾರೆ.
ಈ ಸಂದರ್ಭ ಅವರು ಮಾಧ್ಯಮದೊಂದಿಗೆ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೊಂಡಮಯ ವಾಗಿದ್ದು ಕೂಡಲೇ ಲೋಕೋಪಯೋಗಿ ಇಲಾಖೆ ನಿದ್ರೆಯಿಂದ ಎಚ್ಚೆತ್ತು ರಸ್ತೆ ದುರಸ್ತಿ ಪಡಿಸಬೇಕು ಹಾಗೂ ಹೆದ್ದಾರಿ ಬದಿ ದಾರಿದೀಪ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
26/05/2022 07:05 pm