ಮುಲ್ಕಿ:ಸಮಾನತೆ, ಸಮಭಾವ ಹಾಗೂ ಭ್ರ್ರಾತತ್ವ ಗುಣಗಳ ಮೂಲಕ ರಮೇಶ್ ಕುಮಾರ್ ರಾಜ್ಯ ಸಂಘಟನೆಯನ್ನು ರಾಷ್ಟ್ರ ಮಟ್ಟಕ್ಕೆ ಬೆಳೆಸಿದ ಉನ್ನತ ವ್ಯಕ್ತಿಯಾಗಿದ್ದರು ಎಂದು ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘಟನೆಯ ಕೇಂದ್ರ ಸಮಿತಿ ಉಪಾಧ್ಯಕ್ಷ ಸಿ.ಎ.ಜೋಸೆಫ್ ಹೇಳಿದರು.
ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಸೋಮವಾರ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘಟನೆಯ ರಾಜ್ಯ ಸಮಿತಿ ಮತ್ತು ಉಡುಪಿ ವಿಭಾಗೀಯ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ಎಲ್ಐಸಿಎಂಐ ರಾಜ್ಯ ಅಧ್ಯಕ್ಷ ರಮೇಶ್ ಕುಮಾರ್ ರವರಿಗೆ ಪುಷ್ಪ ನಮನದೊಂದಿಗೆ ನುಡಿನಮನ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಲ್ಐಸಿಎಂಐ ಉಡುಪಿ ವಿಭಾಗೀಯ ಅಧ್ಯಕ್ಷ ಲೋಕೇಶ್ ಶೆಟ್ಟಿ ಮಾತನಾಡಿ,ಎಲ್ಲರೊಂದಿಗೆ ಸಮಾನತೆಯಲ್ಲಿ ಬೆರೆತು ಸಂಘಟನೆಯನ್ನು ಪರಿಚಯಿಸುವುದರೊಂದಿಗೆ ಇತರರ ಅಭಿವೃದ್ಧಿಯಲ್ಲಿಯೂ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದ ಉತ್ತಮ ನಾಯಕರಾಗಿದ್ದರು ಎಂದರು.
ಎಲ್ಐಸಿಎಂಐ ಮೂಲ್ಕಿ ಘಟಕದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್ ನುಡಿನಮನ ಸಲ್ಲಿಸಿ, ಪ್ರತಿನಿಧಿ ಸಂಘದಲ್ಲಿ ಮಹಿಳೆಯರಿಗೂ ಸಮಾನ ನಾಯಕತ್ವ ಲಭ್ಯವಾಗಬೇಕು ಎಂಬ ಧೋರಣೆಯಿಂದ ಮಹಿಳಾ ಸಂಘಟನೆ ಕಟ್ಟಿ ಬೆಳೆಸಿದ ಮಹಾನ್ ನಾಯಕರಾಗಿದ್ದು ಅಗಲುವಿಕೆ ಬಹಳ ಅಘಾತ ತಂದಿದೆ ಎಂದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಂ.ಎಸ್ ಭಟ್ಉಡುಪಿ. ಪ್ರದೀಪ್ ಮೈಸೂರು, ಉಚ್ಚ ಗಾವಂಕರ್ ಬೆಳಗಾಂ,ನೌಶಾದ್ ಆಲಿ ರಾಯಚೂರು,ಮಹದೇವಪ್ಪ ಶಿವಮೊಗ್ಗ, ಪದ್ಮನಾಭ ಶೆಟ್ಟಿ ಸುಳ್ಯ, ಮೂಲ್ಕಿ ಶಾಖಾ ಮಹಿಳಾ ಪ್ರತಿನಿಧಿ ಅನಿತಾ ಡಿಸೋಜ, ಹಿರಿಯ ಪ್ರತಿನಿಧಿ ಗಿರೀಶ್ ಕುಮಾರ್ ನುಡಿನಮನ ಸಲ್ಲಿಸಿದರು.
ಈ ಸಂದರ್ಭ ಎಲ್ಐಸಿಎಂಐ ದಕ್ಷಿಣ ಮಧ್ಯ ವಲಯದ ಅಧ್ಯಕ್ಷ ಎಲ್.ಮಂಜುನಾಥ, ಎಲ್ಐಸಿಎಂಐ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಯೋಗೀಶ್,ರಾಜ್ಯ ಸಮಿತಿ ಕೋಶಾಧಿಕಾರಿ ಡಿ.ಸಿ. ಶಿವಮೂರ್ತಿ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್, ಎಲ್ಐಸಿ ಉಡುಪಿ ಹಿರಿಯ ವಿಭಾಗೀಯ ಅಧಿಕಾರಿ ರಾಜೇಶ್ ಮುಧೋಳ್, ಉಡುಪಿ ವಿಭಾಗದ ಸೇಲ್ಸ್ ಮೆನೇಜರ್ ಸದಾಶಿವ ಭಟ್,ಸಿಎಲ್ಐಎ ಡೆಪ್ಯೂಟಿ ಮೆನೇಜರ್ ದಿನೇಶ್ ಪ್ರಭು,ಮುಲ್ಕಿ ಶಾಖಾ ಪ್ರಭಂದಕರಾದ ದುರ್ಗಾ ರಾಮ್ ಶೆಣೈ,ಉಪ ಶಾಖಾಧಿಕಾರಿ ಸೋಮಸುಂದರ್, ಗೀತಾ ರಮೇಶ್ ಕುಮಾರ್,ಅಶ್ವಿನ್, ಅಕ್ಷಯ್, ಉಪಸ್ಥಿತರಿದ್ದರು.
Kshetra Samachara
23/05/2022 09:17 pm