ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಹಳೆಯಂಗಡಿ, ಪಕ್ಷಿಕೆರೆ, ಪಡುಪಣಂಬೂರು, ಅತಿಕಾರಿಬೆಟ್ಟು ಪರಿಸರದಲ್ಲಿ ಮಂಗಳವಾರ ರಾತ್ರಿ ಭಾರೀ ಮಳೆಯಾಗಿದ್ದು ಕೆಲವೆಡೆ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ.
ಮುಂಜಾನೆ ಬೀಸಿದ ಬಾರೀ ಮಳೆ ಗಾಳಿಗೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ದಾಮಸ್ಕಟ್ಟೆ ಏಳಿಂಜೆ ರಾಜ್ಯ ಹೆದ್ದಾರಿಯ ಮುತ್ತಾಯಕೆರೆಯ ಬಳಿ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ
ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಐಕಳ ಗ್ರಾ.ಪಂ. ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಸದಸ್ಯ ಪ್ರಕಾಶ್ ಶೆಟ್ಟಿ , ಕಿನ್ನಿಗೋಳಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಧಾವಿಸಿ ಕಾರ್ಯಪ್ರವೃತ್ತರಾಗಿ ಮರವನ್ನು ತೆರವುಗೊಳಿಸಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಪಂಚಾಯತ್ ಗಳಲ್ಲಿ ಭಾರಿ ಮಳೆಯಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಕೆಸರು ಮಾಯವಾಗಿ ಪರಿಣಮಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ.
Kshetra Samachara
18/05/2022 01:10 pm