ಮೂಡುಬಿದಿರೆ: ಇರುವೈಲ್ಕಾರ್ ಮೂಲದ ಐ. ಮಹೇಶ್ ಪ್ರಭು- ವಂದನಾ ಪ್ರಭು ದಂಪತಿಯ ದ್ವಿತೀಯ ಪುತ್ರಿ ಸ್ಮೃತಿ ಪ್ರಭು 2018-21 ರ ಬ್ಯಾಚುಲರ್ ಆಫ್ ಕಂಪ್ಯೂಟರ್ ಎಪ್ಲಿಕೇಶನ್ ಪದವಿಯನ್ನು ದಾಖಲೆಯ 9.7 ಎಸ್.ಜಿ.ಪಿ.ಎ ಸಾಧನೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಈಕೆ ಬೆಂಗಳೂರಿನ ಜೈನ್ ಯೂನಿವರ್ಸಿಟಿ ವಿದ್ಯಾರ್ಥಿ ನಿ ದುಬೈನಲ್ಲೇ ಮಣಿಪಾಲ್ ಯೂನಿವರ್ಸಿಟಿ ಮೂಲಕ ಎಂ.ಎಸ್ಸಿ, ಇನ್ ಇನ್ಫಾರ್ಮೇಶನ್ ಸೈನ್ ಶಿಕ್ಷಣ ಪಡೆಯಲು ನಿರ್ಧರಿಸಿರುವ ಸ್ಮೃತಿ ಈಗಾಗಲೇ ಅಮೆರಿಕಾ ಮೂಲದ ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗಾಮಿಂಗ್ ಮತ್ತು ಇಮೋಶನಲ್ ಇಂಟೆಲಿಜೆನ್ಸ್ ಸರ್ಟಿಫೈಡ್ ಕೋರ್ಸ್ಗಳನ್ನು ಪೂರೈಸಿ ಕೋವಿಡ್ ಹಾವಳಿಯ ನಂತರದಲ್ಲಿ ಉಚಿತವಾಗಿ ಆನ್ಲೈನ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸರ್ ಮ್ಯಾನೇಜ್ಮೆಂಟ್ ಆಫ್ ಅಕೌಂಟ್ಸ್ ಅರ್ಹತಾ ಪರೀಕ್ಷೆಗೂ ಸಿದ್ಧತೆ ನಡೆಸಿದ್ದಾರೆ. ಈ ಹಿಂದೆ ಐ. ಮಹೇಶ್ ಪ್ರಭು- ವಂದನಾ ಪ್ರಭು ದಂಪತಿಯ ಪ್ರಥಮ ಪುತ್ರಿ ಶ್ರೀಕಲಾ ಪ್ರಭು ಅವರು 2105ರ ಬ್ಯಾಚ್ನ ಸಿ.ಎ. ಅಂತಿಮ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಪಡೆದು ದಾಖಲೆ ನಿರ್ಮಿಸಿದ್ದು ಸಿ.ಎಂ.ಎ. ಮತ್ತು ಸಿ.ಐ.ಎಸ್.ಎ ಪೂರೈಸಿ ಪ್ರಸ್ತುತ ದುಬೈನಲ್ಲೇ ಲೆಕ್ಕಪರಿಶೋಧಕರಾಗಿದ್ದಾರೆ.
Kshetra Samachara
03/05/2022 08:35 am