ಮೂಡುಪೆರಾರ: ಮಂಗಳೂರು ಉತ್ತರ ಕ್ಷೇತ್ರದ *ಪಡುಪೆರಾರ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಕೊಳಪಿಲದ ಬಳಿ ನಂದಿನಿ ಉಪನದಿಗೆ ಸುಮಾರು 165 ಲಕ್ಷ ವೆಚ್ಚದಲ್ಲಿ ಅಡ್ಡಲಾಗಿ ಕಿಂಡಿ ಅಣೆಕಟ್ಟಿನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.
ಈ ಬಗ್ಗೆ ಮಾತನಾಡಿದ ಶಾಸಕರು ರಾಜ್ಯ ಸರಕಾರ ಪಶ್ಚಿಮ ವಾಹಿನಿ ಯೋಜನೆಯಡಿ ನಮ್ಮ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಭಾಗದ ವಿವಿದೆಡೆ ನಮ್ಮ ಮನವಿಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಅನುದಾನ ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿ ಇವೆ ಎಂದು ತಿಳಿಸಿದರು.
ಪಂಚಾಯತ್ ಅಧ್ಯಕ್ಷ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಸೇಸಮ್ಮ, ಸದಸ್ಯರುಗಳಾದ ದೇವಪ್ಪ ಶೆಟ್ಟಿ, ಮೀನಾಕ್ಷಿ, ಗಣೇಶ್, ಯಶವಂತ ಪೂಜಾರಿ, ಸುಜಾತ, ವಿನೋದ್, ಗಣೇಶ್ ಬಿ. ಸ್, ವನಿತಾ ಹಾಗೂ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
24/04/2022 03:25 pm