ಮೂಡುಪೆರಾರ: ಮಂಗಳೂರು ನಗರ ಉತ್ತರ ಕ್ಷೇತ್ರದ ಪಡುಪೆರಾರ ಪಂಚಾಯತ್ ನ ಮೂಡುಪೆರಾರ ಗ್ರಾಮದ ಮುಂಡಬೆಟ್ಟು ಬಳಿ ನಂದಿನಿ ಉಪನದಿಗೆ ಅಡ್ಡಲಾಗಿ ಸುಮಾರು 1 ಕೋಟಿ 70 ಲಕ್ಷದ ಕಿಂಡಿ ಅಣೆಕಟ್ಟಿನ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.
ಶಾಸಕರೊಂದಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಸೇಸಮ್ಮ, ಸದಸ್ಯರುಗಳಾದ ದೇವಪ್ಪ ಶೆಟ್ಟಿ, ಮೀನಾಕ್ಷಿ, ಗಣೇಶ್, ಯಶವಂತ ಪೂಜಾರಿ, ಸುಜಾತ, ವಿನೋದ್, ಗಣೇಶ್ ಬಿ. ಸ್, ವನಿತಾ ಹಾಗೂ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
23/04/2022 02:21 pm