ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳೆಗಾಲದ ಪೂರ್ವಭಾವಿಯಾಗಿ ಅಧಿಕಾರಿಗಳ ಜೊತೆ ಶಾಸಕ ಡಾ. ಭರತ್ ಶೆಟ್ಟಿ ತುರ್ತು ಸಭೆ

ಮಂಗಳೂರು ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಮನಪಾ ಸದಸ್ಯರು, ಪಾಲಿಕೆ ಆಯುಕ್ತರು, ಇಂಜಿನಿಯರ್ಸ್, ಕಂದಾಯ, ಆರೋಗ್ಯ, ನಗರ ಯೋಜನೆ, ಒಳಚರಂಡಿ, ನೀರಿನ ವಿಭಾಗಗಳ ಅಧಿಕಾರಿಗಳ ಜೊತೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಸಮಾಲೋಚನಾ ಸಭೆ ಪಾಲಿಕೆ ಪರಿಷತ್ತು ಸಭಾಂಗಣದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಳೆಗಾಲದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ, ಹೊಸ ಒಳಚರಂಡಿ ರಚನೆ ಮತ್ತು ದುರಸ್ತಿ, ಕುಡಿಯುವ ನೀರಿನ ಪೂರೈಕೆ, ಅಭಿವೃದ್ಧಿಯಾಗಲು ಬಾಕಿ ಇರುವ ರಸ್ತೆಗಳ ತುರ್ತು ತೇಪೆ ಕಾರ್ಯ, ವಿದ್ಯುತ್ ಕಾಮಗಾರಿಗಳ ಬಗ್ಗೆ ಪಾಲಿಕೆ ಸದಸ್ಯರ ಅಭಿಪ್ರಾಯಗಳನ್ನು ಪಡೆದು, ಆಗಬೇಕಾದ ಕೆಲಸಕಾರ್ಯಗಳ ಬಗ್ಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಸಭೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ, ಆಯುಕ್ತ ಅಕ್ಷಯ್ ಶ್ರೀಧರ್, ಪಾಲಿಕೆ ಸದಸ್ಯರು, ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

20/04/2022 10:48 am

Cinque Terre

900

Cinque Terre

0

ಸಂಬಂಧಿತ ಸುದ್ದಿ