ಸುರತ್ಕಲ್: ಪಾಲಿಕೆ ವ್ಯಾಪ್ತಿಯ ಮುಕ್ಕ ಸತ್ಯಧರ್ಮದೇವಿ ದೇವಸ್ಥಾನದ ಆವರಣಕ್ಕೆ ಅಳವಡಿಸಲಾದ ಇಂಟರ್ ಲಾಕ್ ಕಾಮಗಾರಿಯನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ದೇವರ ದರ್ಶನ ಮಾಡಿ ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು.
ಪಾಲಿಕೆ ಸದಸ್ಯೆ ಶ್ವೇತಾ ಪೂಜಾರಿ, ಭಾರತೀಯ ಜನತಾ ಪಾರ್ಟಿ ಉತ್ತರ ಮಂಡಲದ ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ , ಬೂತ್ ಅಧ್ಯಕ್ಷ ಜಗದೀಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಪ್ರಮುಖರಾದ ಪ್ರಶಾಂತ್ ಶೆಟ್ಟಿ, ಅರುಣ, ರಾಕೇಶ್ ಬಂಗೇರ, ರಾಜೇಶ್, ರಾಘವೇಂದ್ರ ಶೆಣೈ ಹಾಗೂ ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.
Kshetra Samachara
15/04/2022 05:49 pm