ಮುಲ್ಕಿ: ಕಿನ್ನಿಗೋಳಿಪಟ್ಟಣ ಪಂಚಾಯತ್ ನಲ್ಲಿ ಡಾ. ಅಂಬೇಡ್ಕರ್ ರವರ 131ನೇ ಜನ್ಮದಿನವನ್ನು ಆಚರಿಸಲಾಯಿತು.
ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಹಿಂದುಳಿದ ವರ್ಗದವರು ಸಮಾಜದಲ್ಲಿ ಮೇಲೆ ಬರಲು ಹೋರಾಟ ನಡೆಸಿದ ಧೀಮಂತ ವ್ಯಕ್ತಿಯಾಗಿದ್ದು ಅವರ ಹೋರಾಟ ನಮಗೆ ಮಾದರಿಯಾಗಲಿ ಎಂದರು.
ಈ ಸಂದರ್ಭ ಪಂಚಾಯತ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
14/04/2022 10:05 pm