ಮೂಡುಬಿದಿರೆ: ಅಶ್ವತ್ಥಪುರ ಇಲ್ಲಿಗೆ ಸಮೀಪದ ಕರಿಕುಮೇರು ಎಂಬಲ್ಲಿ ಕೋಟಿ ಚೆನ್ನಯ್ಯ ಯಕ್ಷಬಳಗ ಇದರ 7ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ ವಾಮನ ಕುಲಾಲ್ ವೇಣೂರು ಅವರನುಡಿ ನಮನ ಜೊತೆಗೆ ಅವರ ಪತ್ನಿ ಮತ್ತು ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ಮಾಡಲಾಯಿತು. ದೆಂಥಡ್ಕ ಮೇಳದ ಆರು ಹಿರಿಯ ಭಾಗವತರಾದ ಕಣಿಯೂರು ಸೂರ್ಯನಾರಾಯಣ ಭಟ್, ಮೋಹನ್ ಶೆಟ್ಟಿಗಾರ್, ನಾರಾಯಣ ಮೂಲಡ್ಕ, ಭಾಗವತ ಶಿವಪ್ರಸಾದ್ ಎಡಪದವು, ಚಂದ್ರಶೇಖರ ಶೆಟ್ಟಿ ಬೆಟ್ಟಂಪಾಡಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಳತ್ತೂರು ಮಹಾಲಿಂಗೇಶ್ವರ ದೇವಳದ ಮೊಕ್ತೇಸರರಾದ ಸಂತೋಷ ಹೆಗಡೆ, ಲಯನ್ ಗಣೇಶ್ ಶೆಟ್ಟಿ ಮುಚ್ಚೂರು, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಅಶೋಕ್ ನಾಯಕ್ ಕೀಲೆ, ಪ್ರಣವ್ ಕ್ಯಾಟರರ್ಸ್ ನ ಅಶೋಕ್, ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ, ಮಿಜಾರು ಗುತ್ತು ಹರಿಪ್ರಸಾದ್ ಶೆಟ್ಟಿ, ವಿ.ಹೆಚ್.ಪಿ. ಮುಖಂಡರಾದ ದಿನೇಶ್ ಮಿಜಾರು, ಸುಧಾಕರ ಪೂಜಾ ಉಪಸ್ಥಿತರಿದ್ದರು.
Kshetra Samachara
08/04/2022 04:16 pm