ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಬದನಡಿ ದೇವಸ್ಥಾನದ ಹಸಿರು ಹೊರಕಾಣಿಕೆಯ ಸಮರ್ಪಿಸಿದ ಪೂವಾಳ ಭಕ್ತಾದಿಗಳು

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಆಯೋಜಿಸಲಾದ ಹೊರಕಾಣಿಕೆ ಮೆರವಣಿಗೆಗೆ ಬೆಳ್ತಂಗಡಿ ತಾಲೂಕಿನ ಪೂವಾಳ ಗ್ರಾಮಸ್ಥರು ಹಸಿರು ಹೊರಕಾಣಿಕೆಗಳನ್ನು ಸಮರ್ಪಿಸಿದರು.

ಇಂದು ಅಂದರೆ ಮಂಗಳವಾರದಂದು ಮಧ್ಯಾಹ್ನ 3.30ಕ್ಕೆ ಹೊರಡುವ ಹೊರಕಾಣಿಕೆಯಲ್ಲಿ ಪೂವಾಳ ಗ್ರಾಮಸ್ಥರು ಕೈಜೋಡಿಸಿದರು. ಬಾಳೆಎಳೆ, ತೆಂಗಿನಕಾಯಿಯ, ಹಲಸಿನಹಣ್ಣು, ಕಡಲೆ ಸೇರಿದಂತೆ ಹಲವಾರು ಕಾಣಿಕೆಗಳನ್ನು ಸಂಗ್ರಹಿಸಿದರು.

ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಸಿದ್ಧಕಟ್ಟೆಯಿಂದ ಹೊರಡುವ ಆಕರ್ಷಕ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಕಟೀಲು ಕ್ಷೇತ್ರದ ಕಮಲಪ್ರಸಾದ ಅಸ್ರಣ್ಣ ಮತ್ತು ಪೂಂಜ ಕ್ಷೇತ್ರದ ಕೃಷ್ಣಪ್ರಸಾದ ಅಸ್ರಣ್ಣ ಚಾಲನೆ ನೀಡಲಿದ್ದಾರೆ.

ಸಿದ್ಧತಾ ಸಮಯದಲ್ಲಿ ಪೂವಾಳ ಶ್ರೀ ರಾಮಾಂಜನೇಯ ಫ್ರೆಂಡ್ಸ್ ಸೇರಿದಂತೆ ಹಿರಿಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/04/2022 04:29 pm

Cinque Terre

1.6 K

Cinque Terre

0

ಸಂಬಂಧಿತ ಸುದ್ದಿ