ಮೂಡುಬಿದಿರೆ: ಉತ್ತರ ಖಂಡದ ರುದ್ರಾಪುರದಲ್ಲಿ ನಡೆಯಲಿರುವ 23 ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುವ ರಾಜ್ಯದ ತಂಡಕ್ಕೆ ಕರ್ನಾಟಕ ಪೂರ್ವಭಾವಿ ತರಬೇತಿ ಶಿಬಿರವು ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭಗೊಂಡಿತು.
ರಾಜ್ಯ ವಾಲಿಬಾಲ್ ಸಂಸ್ಥೆ, ಅಡಕ್ ಸಮಿತಿ ಬೆಂಗಳೂರು, ದ.ಕ.ಜಿಲ್ಲಾ ವಾಲಿಬಾಲ್ ಸಂಸ್ಥೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ಹಾಗೂ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ನಡೆಯುವ ಶಿಬಿರವನ್ನು ಶಾಸಕ ಎ.ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ರಾಜ್ಯದಿಂದ ರಾಷ್ಟ್ರಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ಇಲ್ಲಿ ನೀಡುವ ತರಬೇತಿಯನ್ನು ಪಡೆದು ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿಯನ್ನು ತರುವಂತ್ತಾಗಲಿ ಎಂದು ಶುಭ ಹಾರೈಸಿದರು.
ವಾಲಿಬಾಲ್ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಶಶಿ ಶಿವಮೊಗ್ಗ, ಕೋಶಾಧಿಕಾರಿ ಭುಜೇಂದ್ರ ಬೆಂಗಳೂರು, ಜಿಲ್ಲಾ ಅಸೋಸಿಯೇಷನ್ ನ ಅಧ್ಯಕ್ಷ ಸತೀಶ್ ಕುಮಾರ್ , ಕಾರ್ಯದರ್ಶಿ ಶಂಕರ್, ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷ ವಿನಯ ಆಳ್ವ, ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತರಬೇತುದಾರರಾದ ರಾಜಾರಾಮ್ ಮಂಗಳೂರು, ಇಂತಿಯಾಝ್ ಅಹಮ್ಮದ್ ಶಿವಮೊಗ್ಗ ಉಪಸ್ಥಿತರಿದ್ದರು.
ತಾಲೂಕು ಕಾರ್ಯದರ್ಶಿ ನಾಗೇಶ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Kshetra Samachara
01/04/2022 09:55 pm