ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಂಕಮಿಜಾರಿನಲ್ಲಿ 4.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ

ಮೂಡುಬಿದಿರೆ : ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಒಂಟಿಮಾರು ಬೆಂಗದಬೆಟ್ಟು ಎಂಬಲ್ಲಿ ರೂ 2.16 ಕೋ, ಕಿಜನಬೆಟ್ಟು ಕುಕ್ಕುದಡಿ ಎಂಬಲ್ಲಿ 1.15 ಕೋ ಹಾಗೂ ಬಡಗಮಿಜಾರು ಗ್ರಾಮದ ಕೊಪ್ಪಳಪಾದೆ 1.24 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣದ ಕಾಮಗಾರಿಗೆ ಶಾಸಕ ಎ.ಉಮಾನಾಥ ಕೋಟ್ಯಾನ್ ಅವರು ಶಿಲಾನ್ಯಾಸಗೈದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಕೃಷಿಕರಿಗೆ ನೀರಿಗೆ ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಆದ್ಯತೆಯನ್ನು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ 34 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ.ಅಲ್ಲದೆ ಸುಮಾರು ಒಂದೂ ಸಾವಿರಕ್ಕೂ ಮಿಕ್ಕಿ ಅನುದಾನವನ್ನು ತರಲಾಗಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದ ಅವರು ಏ.27ರಂದು ರಾಜ್ಯದ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಲಿದ್ದು ಮಿನಿ ವಿಧಾನ ಸೌಧ ಸಹಿತ ನೀರಿನ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ,ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಎಂಜಿನಿಯರ್ ರಾಕೇಶ್, ಬಿಜೆಪಿ ಮುಖಂಡರಾದ ಅಜೇಯ ರೈ, ಕಿಶೋರ್ ಕುಮಾರ್, ವಿದ್ಯಾನಂದ, ಗುತ್ತಿಗೆದಾರ ಸಂತೋಷ್ ಶೆಟ್ಟಿ, ಕಂಬಳ ಓಟಗಾರ ಶ್ರೀನಿವಾಸ ಗೌಡ, ಪಂಚಾಯತ್ ಸದಸ್ಯರು, ಊರಿನ ಪ್ರಮುಖರು ಈ ಸಂದರ್ಭದಲ್ಲಿದ್ದರು.

Edited By : PublicNext Desk
Kshetra Samachara

Kshetra Samachara

01/04/2022 10:42 am

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ