ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿರಾಜ ಕಾಲೋನಿ, ಪುಚ್ಚಮೊಗರು ಇದರ ಶಾಲಾ ರಜತ ಮಹೋತ್ಸವದ ಅಂಗವಾಗಿ ರಂಗವೇದಿಕೆ, ಕಾಂಕ್ರೀಟ್ ರಸ್ತೆ, ಶಾಲಾ ಕಟ್ಟಡವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಕುಮಾರಿ ಮೇಘನ, ಸಾಹಿತಿ ಉಗ್ಗಪ್ಪ ಪೂಜಾರಿ, ನಮ್ಮ ಬೆದ್ರ ವಾರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ, ಪಗ್ರತಿ ಪರ ಕೃಷಿಕ ಶ್ಯಾಮ್ ಭಟ್, ಶಾಲಾ ಹಳೇ ವಿದ್ಯಾರ್ಥಿ ರಾಜಾಕೃಷ್ಣ ಭಟ್, ರಾಷ್ಟ್ರಮಟ್ಟದ ಕ್ರೀಡ ಸಾಧಕಿ ರಮ್ಯಶ್ರೀ ಜೈನ್, ಕಾಳಿಂಕ ಡಿಜಿಟಲ್ಸ್ ಮುಖ್ಯಸ್ಥೆ ಶಾಂತಲಾ ಆಚಾರ್ಯ ಅವರನ್ನು ಗೌರವಿಸಲಾಯಿತು.
ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಚಿವ ರಮಾನಾಥ ರೈ, ಮಾರೂರು ಖಂಡಿಗ ರಾಮದಾಸ ಅಸ್ರಣ್ಣರು, ಪುಚ್ಚಮೊಗರು ಮಸೀದಿಯ ಧರ್ಮಗುರು ಜನಾಬ್ ಮಹಮ್ಮದ್ ರಫೀಕ್ ಮದನಿ, ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಉದ್ಯಮಿ ಶ್ರೀಪತಿ ಭಟ್, ಎಸ್.ಕೆ.ಎಫ್ ಮುಖ್ಯಕಾರ್ಯ ನಿರ್ವಹಣ ಅಧಿಕಾರಿ ಸುಮನ್ ಮುರ್ಖಜಿ, ಹೊಸಬೆಟ್ಟು ಗ್ರಾ.ಪಂ. ಉಪಾಧ್ಯಾಕ್ಷ ರೆಕ್ಸನ್ ಪಿಂಟೋ, ರಜತ ಮಹೋತ್ಸವದ ಆಚರಣಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಆಳ್ವ, ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಶಿಕ್ಷಕ ರಮೇಶ್ ನಾಯಕ್ ರಾಯಿ, ಪಿ. ಹನೀಫ್ ಪುಚ್ಚಮೊಗರು, ಸದಾಶಿವ ಪೂಜಾರಿ ಪುಚ್ಚಮೊಗರು, ಗ್ರಾ. ಪಂ. ಮಾಜಿ ಸದಸ್ಯ ಯೋಗಿಶ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಸುಚರಿತ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ಝೂಬಿ, ಕ್ಷೇತ್ರ ಶಿಕ್ಷಣ ಅಧಿಕಾರಿ ದೇವರಾಜು, ಮುಖ್ಯ ಶಿಕ್ಷಕ ವಸಂತ ಕುಮಾರಿ, ಹಳೆ ವಿದ್ಯಾರ್ಥಿ ಸಂತೋಷ್ ಕೋಟ್ಯಾನ್ ಹಾಗೂ ಕುಮಾರ್ ಸುಶ್ರೀತ್ ಉಪಸ್ಥಿತರಿದ್ದರು.
Kshetra Samachara
27/03/2022 08:39 am