ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶವನ್ನು ಇಸ್ಲಾಮೀಕರಣಗೊಳಿಸಲು ವ್ಯವಸ್ಥಿತ ಸಂಚು : ಶರಣ್ ಪಂಪ್‌ವೆಲ್

ಮೂಡುಬಿದಿರೆ : ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಪ್ರತಿ ಗ್ರಾಮಗಳಲ್ಲಿ ವಿಹಿಂಪ ಘಟಕಗಳನ್ನು ರಚಿಸುವ ಗುರಿ ಹೊಂದಿದೆ. 50 ಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರನ್ನು ನೇಮಿಸುವ ಉದ್ದೇಶವನ್ನು ಹೊಂದಿದೆ. ಇಂದು ದೇಶದಲ್ಲಿ ಮೂಲಭೂತವಾದಿಗಳು ಪ್ರತ್ಯೇಕತಾವಾದವನ್ನು ಸೃಷ್ಟಿಸುತ್ತಿದ್ದಾರೆ.

ಅಲ್ಲದೆ ದೇಶವನ್ನು ಇಸ್ಲಾಮೀಕರಣಗೊಳಿಸಲು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ. ಇದಕ್ಕಾಗಿ ಬೇರೆಬೇರೆ ರೀತಿಯ ಹುನ್ನಾರಗಳನ್ನು ನಡೆಸುತ್ತಿದ್ದು ಇದೀಗ ಹಿಜಾಬ್ ಜಿಹಾದ್ ಹೊಸದಾಗಿ ಸೇರ್ಪಡೆಯಾಗಿದೆ ಎಂದು ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು.

ವಿ.ಹಿಂ.ಪ ಮೂಡುಬಿದಿರೆ ಘಟಕದ ವತಿಯಿಂದ ಮಂಗಳವಾರ ಕನ್ನಡಭವನದಲ್ಲಿ ನಡೆದ ಧರ್ಮ ರಕ್ಷಾ ನಿಧಿ ಅರ್ಪಣಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು ದೈವ ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ಇಲ್ಲವೆಂದು ಧಾರ್ಮಿಕ ಧತ್ತಿ ಇಲಾಖೆಯ ಸುತ್ತೋಲೆಯಲ್ಲಿರುವುದರ ಬಗ್ಗೆ ಉಲ್ಲೇಖಿಸಿದ ಅವರು ಧರ್ಮ ರಕ್ಷಾ ನಿಧಿಯನ್ನು ಯಾವ ರೀತಿಯಾಗಿ ವಿನಿಯೋಗಿಸಲಾಗುತ್ತದೆ ಎಂಬುದರ ಬಗ್ಗೆ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

24/03/2022 03:57 pm

Cinque Terre

1.44 K

Cinque Terre

0

ಸಂಬಂಧಿತ ಸುದ್ದಿ