ಕಾರ್ಕಳ: ಅಖಿಲ ಕರ್ನಾಟಕ ಸ್ಪೋರ್ಟ್ಸ್ & ಆರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಬೆಂಗಳೂರಿನ ಶ್ರೀ ಗುಂಡುರಾವ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮಲ್ಲೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ ಮಾರ್ಷಲ್ ಆರ್ಟ್ಸ್ ಟೇಕ್ವಾಂಡೋದಲ್ಲಿ ಕಾರ್ಕಳ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳಿಗೆ ಚಿನ್ನ - ಬೆಳ್ಳಿ ಪದಕ ಲಭಿಸಿದೆ.
ಮಾರ್ಷಲ್ ಆರ್ಟ್ಸ್ ಕ್ರೀಡಾಪಟುಗಳಾದ ಪವನ್, ಸಂತೋಷ್, ಗುಣವೀರ, ಸತ್ಯಪ್ರಸಾದ್, ಸಂಜಯ್ ಇವರು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ಸಾಧನೆ ಗೈದಿದ್ದಾರೆ.
Kshetra Samachara
14/03/2022 05:32 pm