ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಉತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾತಂಡದಿಂದ "ರಂಬಾರುಟ್ಟಿ"

ಕಾರ್ಕಳ: ಭಾಷೆ, ಸಂಸ್ಕ್ರತಿ, ಕಲೆಯ ಸಂಭ್ರಮವಾದ ಕಾರ್ಕಳ ಉತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾತಂಡ ಶಾಂಭವಿ ಕಲಾವಿದರು ಸಾಣೂರು ಇವರ ತಂಡದಿಂದ "ರಂಬಾರುಟ್ಟಿ "ಎಂಬ ಜನಮೆಚ್ಚುಗೆ ಗಳಿಸಿದ ತುಳು ಹಾಸ್ಯತ್ಮಕ ನಾಟಕವು ಶುಕ್ರವಾರ ರಾತ್ರಿ 9 ಗಂಟೆಗೆ ಸರಿಯಾಗಿ ದಿ|| ಗೋಪಾಲ ಭಂಡಾರಿ ವೇದಿಕೆ ಗಾಂಧಿ ಮೈದಾನದಲ್ಲಿ ಈ ನಾಟಕವು ಪ್ರದರ್ಶನಗೊಳ್ಳಲಿದೆ.

ಈ ಕಥೆಯನ್ನು ರತ್ನವರ್ಮ ಪ್ರಶಸ್ತಿ ವಿಜೇತ ಬರಹಗಾರ ಅಶೋಕ್‌ ಪೂಜಾರಿ ಸಾಣೂರು ಇವರ ಕಥೆ,ನಿರ್ದೇಶನ, ಗೀತರಚನೆಯಲ್ಲಿ, ರಂಗ ಸಾರಥಿ ಭಾಸ್ಕರ್‌ ಸಾಣೂರು ಸಮಗ್ರ ನಿರ್ವಹಣೆ, ವಿಖ್ಯಾತ್‌ ಶೆಟ್ಟಿ, ಕರುಣಾಕರ್‌ ಎಸ್‌ ಕೋಟ್ಯಾನ್‌ ಇವರ ಸಂಪೂರ್ಣ ಸಹಕಾರದಲ್ಲಿ, ಸಂತೋಷ್‌ ಕುಲಾಲ್‌ ಅವರ ಸಂಚಾಲಕದಲ್ಲಿ ಹಾಗೂ ಚಲನಚಿತ್ರ ನಟ ಶ್ರೀ ಬಂಗೇರ ಅವರ ಸಲಹೆ ಸಹಕಾರದೊಂದಿಗೆ ಈ ಅದ್ಭುತ ನಾಟಕವು ರಚನೆಗೊಂಡಿದ್ದು, ಜನ ಮೆಚ್ಚುಗೆಯನ್ನು ಗಳಿಸಿದ ತಂಡವಾಗಿ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದೆ.

ಈ ಕಲಾತಂಡವು ಅತೀ ಕಡಿಮೆ ಅವಧಿಯಲ್ಲಿ ಸ್ಥಾಪನೆಗೊಂಡು ತನ್ನ ಮೂರು ವಿಭಿನ್ನ ಸಾಂಸರಿಕ, ಹಾಸ್ಯಾ ಆಧಾರಿತ ನಾಟಕಗಳೊಂದಿಗೆ ಉತ್ತಮ ಸಂದೇಶವನ್ನು ಸಾರುತ್ತಿರುವ ಪ್ರಬುದ್ಧ ಕಲಾತಂಡವಾಗಿ ಮಿಂಚುತ್ತಿದೆ. ಅಷ್ಟೇ ಅಲ್ಲದೇ ತಮ್ಮ ತಂಡದ ಕಲಾಚಾತುರ್ಯವನ್ನು ಕಿರುಚಿತ್ರದಲ್ಲಿಯೂ ಒಟ್ಟಾಗಿ ಕೆಲಸ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ "ಉಸಿರು" ಎಂಬ ಕಿರುಚಿತ್ರಕ್ಕೆ ಆಳ್ವಾಸ್‌ ವಿದ್ಯಾಸಂಸ್ಥೆಯಲ್ಲಿ ನಡೆದ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಕೀರಿಟವನ್ನು ತಮ್ಮದಾಗಿಸಿಕೊಂಡಿದೆ.

Edited By : PublicNext Desk
Kshetra Samachara

Kshetra Samachara

10/03/2022 02:35 pm

Cinque Terre

1.52 K

Cinque Terre

0

ಸಂಬಂಧಿತ ಸುದ್ದಿ