ದೇರೆಬೈಲ್:ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆಯ ವ್ಯಾಪ್ತಿಯ *ದೇರೆಬೈಲು ಉತ್ತರ 17ನೇ ವಾರ್ಡ್ ನ ಸಹಯೋಗದಲ್ಲಿ ರೇಷನ್ ಕಾರ್ಡ್ ನೋಂದಣಿ ಹಾಗೂ ಈ-ಶ್ರಮ ಕಾರ್ಡ್ ನೋಂದಣಿ ಅಭಿಯಾನವನ್ನು ಹಾಗೂ ವಿದ್ಯುತ್ ವಂಚಿತ 5 ಕುಟುಂಬಗಳಿಗೆ ಬೆಳಕು ಯೋಜನೆ ಮೂಲಕ ಪಡೆದ ವಿದ್ಯುತ್ ಸಂಪರ್ಕವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಚಾಲನೆ ನೀಡಿದರು.
ಕೋಡಿಕಲ್ ನ ಬಾಪೂಜಿ ನಗರದ ಬಾಬು ಜಗಜೀವನ್ ರಾಮ ಸೇವಾ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಮನಪಾ ಸದಸ್ಯ ಮನೋಜ್ ಕುಮಾರ್, ಬಂಗ್ರಕುಳೂರು ವಾರ್ಡಿನ ಸದಸ್ಯ ಕಿರಣ್ ಕುಮಾರ್, ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲ ತಾಣ ಸಂಚಾಲಕರಾದ ಅಜಿತ್ ಕುಮಾರ್ ಉಳ್ಳಾಲ್, ಸಹ ಸಂಚಾಲಕರಾದ ಕಿಶೋರ್ ಬಾಬು, ದೀರೇಶ್ ಕೊಲ್ಯ, ಮಂಡಲ ಸದಸ್ಯರು ರಾಧಿಕಾ ಬಾಳಿಗ, ಜಯಲಕ್ಷ್ಮಿ, ಶಕ್ತಿ ಕೇಂದ್ರ ಪ್ರಮುಖ್ ರವಿ ಪ್ರಸಾದ್, ಕಾರ್ತಿಕ್, ಮಂಜುನಾಥ್, ಮಣಿಕಂಠ, ರಿಜ್ವಾನ್ ಕೋಡಿಕಲ್ ಉಪಸ್ಥಿತರಿದ್ದರು.
Kshetra Samachara
06/03/2022 12:21 pm