ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸುಭಾಷ್ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮುಲ್ಕಿ ನಗರ ಪಂಚಾಯತ್ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಎಂದರು.
ಸಭೆಯಲ್ಲಿ ಮುಲ್ಕಿ ನಗರ ಪಂಚಾಯತ್ 2000 22 23 ನೇ ಸಾಲಿನ ಮುಂಗಡ ಆಯವ್ಯಯ ಅಂದಾಜು ಪಟ್ಟಿ ಮಂಡನೆ ನಡೆಯಿತು.
ಮುಂಗಡ ಪತ್ರದ ಚರ್ಚೆಯಲ್ಲಿ ಸದಸ್ಯ ಪುತ್ತುಬಾವ ಹಾಗೂ ಯೋಗೀಶ್ ಕೋಟ್ಯಾನ್ ಮಾತನಾಡಿ ಮುಲ್ಕಿ ನೂತನ ಬಸ್ ನಿಲ್ದಾಣ ಅಭಿವೃದ್ಧಿಗೆ ಹಾಗೂ ಮುಲ್ಕಿ ನಪಂ ಗೆ ಮತ್ತಷ್ಟು ಅನುದಾನಗಳನ್ನು ಒದಗಿಸಲು ಶಾಸಕರನ್ನು ಒತ್ತಾಯಿಸಿದರು.
ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಸದಸ್ಯೆ ವಂದನಾ ಕಾಮತ್ ಶಾಸಕರ ಗಮನ ಸೆಳೆದರು.
ನ ಪಂ ವ್ಯಾಪ್ತಿಯ ಕೆಎಸ್ ರಾವ್ ನಗರದ ನಾಗಬನದ ಬಳಿ ಎಲ್ಲೆಂದರಲ್ಲಿ ಕಸ ತ್ಯಾಜ್ಯ ಎಸೆಯಲಾಗುತ್ತಿದ್ದು ಅಕ್ರಮಗಳು ನಡೆಯುತ್ತಿದೆ ಈ ಪ್ರದೇಶದಲ್ಲಿ ಸಿಸಿ ಕ್ಯಾಮರ ಗಳನ್ನು ಹಾಕಿ ದುಷ್ಕರ್ಮಿಗಳನ್ನು ಮಟ್ಟಹಾಕುವಂತೆ ಸದಸ್ಯ ಸಂತೋಷ್ ದೇಸುಣಿಗಿ ಅಧ್ಯಕ್ಷರನ್ನು ಆಗ್ರಹಿಸಿದರು.
ಹಳೆಯಂಗಡಿ ಗ್ರಾಮ ಪಂಚಾಯತ್ ಮುಲ್ಕಿ ನಪಂ ಗೆ ಕೊಡಬೇಕಾದ ತುಂಬಿ ನೀರಿನ ಬಾಕಿ ಹಣ 60 ಲಕ್ಷ ಇನ್ನೂ ಸಂದಾಯವಾಗಿಲ್ಲ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಪಂ ಸದಸ್ಯ ಮಂಜುನಾಥ ಕಂಬಾರ ಮಾತನಾಡಿ ಆಶ್ರಯ ಸಮಿತಿಯ ಫಲಾನುಭವಿಗಳ ಆಯ್ಕೆ ಇನ್ನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ನಾಡು ದರ್ಗಾ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯೆ ವಂದನಾ ಕಾಮತ್ ಒತ್ತಾಯಿಸಿದರು. ಆಗ ನ. ಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ಉತ್ತರಿಸಿ ದೂರಿನ ಅನ್ವಯ ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ನೋಟೀಸ್ ನೀಡಲಾಗಿದ್ದು ತನಿಖೆ ನಡೆಸುತ್ತಿದ್ದಾರೆ ಎಂದರು.
ಕೊಲ್ನಾಡು ಕೈಗಾರಿಕಾ ಪ್ರದೇಶದ ಕರ ವಸೂಲಾತಿ ಇನ್ನು ಆಗಿಲ್ಲ ಎಂದು ಮಂಜುನಾಥ ಕಂಬಾರ ಹೇಳಿದರು.
ಸಭೆಯಲ್ಲಿ ಸದಸ್ಯರಾದ ಹರ್ಷರಾಜ ಶೆಟ್ಟಿ, ರಾಧಿಕಾ, ದಯಾವತಿ ಅಂಚನ್, ವೀರಣ್ಣ ಮತ್ತಿತರರು ಮಾತನಾಡಿದರು.
Kshetra Samachara
28/02/2022 03:36 pm