ಮುಲ್ಕಿ: ಮುಂಬೈಯ ನಾಸಿಕ್ ನಲ್ಲಿ ನಡೆದ ಕಳೆದ ದಿನದ ಹಿಂದೆ ಅಪಘಾತದಲ್ಲಿ ಮೃತಪಟ್ಟ ಅಂಗರಗುಡ್ಡೆಯ ಆದರ್ಶ ದಾಸ್ ಇವರಿಗೆ ಸಾರ್ವಜನಿಕವಾಗಿ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮ ಶ್ರೀರಾಮ ಭಜನಾ ಮಂದಿರದ ವಟಾರದಲ್ಲಿ ನಡೆಯಿತು.
ಉತ್ತಮ ವ್ಯಕ್ತಿಯಾಗಿದ್ದು ಎಲ್ಲರೊಂದಿಗೆ ಬೆರೆಯುವ ಯುವಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದು ನಮ್ಮ ಊರಿನ ಯುವಕರಿಗೆ ಪ್ರೇರಣೆಯಾಗಿ ಅಂತಹ ಯುವಕನ ಆದರ್ಶ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ರೀರಾಮ ಭಜನಾ ಮಂದಿರದ ಮುಂಬೈ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಆರ್ ಶೆಟ್ಟಿ ನುಡಿನಮನ ಸಲ್ಲಿಸಿ ಹೇಳಿದರು.
ಮೂರು ನಿಮಿಷದ ಮೌನ ಪ್ರಾರ್ಥನೆ ಮಾಡಿ ಪುಷ್ಪಾರ್ಚನೆ ಮಾಡಲಾಯಿತು. ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರು ಹಾಗೂ ಮಹಿಳಾ ಮಂಡಲದ ಅಧ್ಯಕ್ಷರು ಎಲ್ಲಾ ಸರ್ವ ಸದಸ್ಯರು ಪಾಲ್ಗೊಂಡರು.
Kshetra Samachara
30/01/2022 10:38 am