ಸುರತ್ಕಲ್: ಹಳೆಯಂಗಡಿ ಸಮೀಪದ ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನಕ್ಕೆ 1-75 ಎಕ್ರೆ ಜಾಗವಿದ್ದು ಅದರ ದಾಖಲೆಗಳು ಇಲ್ಲದೆ ಸುಮಾರು 60 ವರ್ಷಗಳಿಂದ ಈ ಬಗ್ಗೆ ಮನವಿ ಸಲ್ಲಿಸುತ್ತಾ ಬಂದಿದ್ದು ಕಾರ್ಯಗತವಾಗಿರಲಿಲ್ಲ
ಈ ಬಗ್ಗೆ ಪ್ರಸಕ್ತ ವರ್ಷ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ಸಲ್ಲಿಸಿದ್ದು .ಮನವಿ ಸ್ಪಂದಿಸಿದ ಸಚಿವರು ಮತ್ತು ಶಾಸಕರು ದಾಖಲೆಯನ್ನು ದೇವಸ್ಥಾನದ ಹೆಸರಿಗೆ ನೀಡಲು ಸಹಾಯಕ ಅಯುಕ್ತರಿಗೆ ಸೂಚಿಸಿದ್ದರು
ಸಚಿವರ ಮತ್ತು ಶಾಸಕರ ಸೂಚನೆ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರು ದಾಖಲೆ ಪತ್ರಗಳನ್ನು ದೇವಸ್ಥಾನದ ಹೆಸರಿಗೆ ಮಾಡಿ ಅದೇಶ ಪತ್ರ ನೀಡಿದ್ದು ಚೇಳೈರು ಗ್ರಾಮ ಕರಣಿಕರಾದ ನಿತಿನ್ ಅವರು ಆದೇಶ ಪತ್ರವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಇಂದು ಹಸ್ತಾಂತರಿಸಿದರು
ಚೇಳೈರು ಗ್ರಾ ಪಂ ಮಾಜೀ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೃಷ್ಣಮೂರ್ತಿ ಭಟ್,ಬೋಜ ಅಂಚನ್,ಸ್ಥಳೀಯರಾದ ಬಾಲಕೃಷ್ಣ ಶೆಟ್ಟಿ, ಜಗದೀಶ್ ಶೆಟ್ಟಿ,ದಿನೇಶ್ ದೇವಾಡಿಗ,ಬೇಬಿ ಶೆಟ್ಟಿ,ಬಾಬು ದೇವಾಡಿಗ ,ಸುರೇಶ್ ಭಟ್,ಆಶಾ ಭಂಡಾರಿ ಉಪಸ್ಥಿತರಿದ್ದರು
Kshetra Samachara
24/01/2022 03:56 pm