ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಸ್ವಚ್ಚ ಪರಿಸರ ನಿರ್ವಹಿಸುವ ಮೂಲಕ ಮಾದರಿಯಾಗಬೇಕು - ಡಾ.ಕೆ.ಇ ಪ್ರಕಾಶ್

ಬಜಪೆ:ಪರಿಸರವನ್ನು ಸ್ವಚ್ಚ ಸುಂದರವಾಗಿ ನಿರ್ವಹಿಸುವ ಮೂಲಕ ಮಾದರಿಯಾಗಬೇಕು ಎಂದು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಡಾ.ಕೆ.ಇ ಪ್ರಕಾಶ್ ಹೇಳಿದರು.ಅವರು ಬಜಪೆ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ಶ್ರೀ ದೇವಿ ತಾಂತ್ರಿಕ ಕಾಲೇಜಿನ ಸಹಯೋಗದಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಸರ ಸ್ವಚ್ಚತಾ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜಿನ ಕಂಪ್ಯೂಟರ್ ಸಾಯನ್ಸ್,ಎರೋನಾಟಿಕಲ್ಸ್,ಎಂ.ಸಿ.ಎ,ಮೆಕ್ಯಾನಿಕಲ್ ,ಇಲೆಕ್ಟ್ರೀಕಲ್ಸ್,ಎಲೆಕ್ಟ್ರಾನಿಕ್ಸ್,ಸಿವಿಲ್ ಹಾಗೂ ಇತರ ವಿಭಾಗಗಳ 250 ವಿದ್ಯಾರ್ಥಿಗಳು ಕೆಂಜಾರು ಶ್ರೀ ದೇವಿ ವಿದ್ಯಾಲಯದಿಂದ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳ ಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ,ಶ್ರೀ ದೇವಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಹಾಜರಿದ್ದರು.ಬಜಪೆ ಪಟ್ಟಣ ಪಂಚಾಯತ್ ನ ಸಿಬ್ಬಂದಿ ಬಾಲಕೃಷ್ಣ ಕತ್ತಲ್ ಸಾರ್ ಕಾರ್ಯಕ್ರಮ ಸಂಯೋಜನೆ ಮಾಡಿದರು.

Edited By : PublicNext Desk
Kshetra Samachara

Kshetra Samachara

08/10/2021 04:50 pm

Cinque Terre

2.37 K

Cinque Terre

0

ಸಂಬಂಧಿತ ಸುದ್ದಿ