ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದ್ರೆ ಪರಿಸರ, ಅರಣ್ಯ ಮತ್ತು ಹಸಿರೀಕರಣದ ಬಗ್ಗೆ ಅಧ್ಯಯನ ಮುಖ್ಯ; ಡಾ. ಭರತ್ ಶೆಟ್ಟಿ

ಮೂಡಬಿದ್ರೆ:ಮಾನವನ ದುರಾಸೆಯಿಂದ ಕಾಡುಗಳು ನಾಶವಾಗುತ್ತಿವೆ. ಅನಗತ್ಯವಾಗಿ ಮರಗಳನ್ನು ಕಡಿಯಲಾಗುತ್ತಿದೆ. 2006 ರಲ್ಲಿ ಜಾರಿಗೆ ಬಂದ ರೈಟ್ ಟು ಫಾರೆಸ್ಟ್ ಅರಣ್ಯವಾಸಿಗಳ ಕುರಿತಾಗಿ ಅನೇಕ ಸುಧಾರಣೆ ತಂದಿದೆ. ಆದರೆ ಯಾವುದೇ ಕಾನೂನು ಸಮರ್ಪಕವಾಗಿ ಅನುಷ್ಟಾನಕ್ಕೆ ತರಬೇಕಾದರೆ ನಮ್ಮ ಮನಸ್ಥಿತಿ ಮುಖ್ಯ. ಈ ನಿಟ್ಟಿನಲ್ಲಿ ಯುವಶಕ್ತಿ ಪರಿಸರ, ಅರಣ್ಯ ಮತ್ತು ಹಸಿರೀಕರಣದ ಬಗ್ಗೆ ಅಧ್ಯಯನ ಮಾಡುತ್ತಿರುವುದು ಆಳ್ವಾಸ್ ವಿದ್ಯಾಸಂಸ್ಥೆ ಗ್ರೀನ್ ಪಾರ್ಲಿಮೆಂಟ್ ಕಾರ್ಯಕ್ರಮದ ಯಶಸ್ಸು ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದರು.

ಅವರು ಕರ್ನಾಟಕ ಅರಣ್ಯ ಇಲಾಖೆ, ಕುದ್ರೆಮುಖ ವೈಲ್ಡ್ ಲೈಫ್ ಡಿವಿಜನ್, ರೊಸ್ಟ್ರಮ್, ದಿ ಸ್ಪೀಕರ್ ಕ್ಲಬ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ ಗ್ರೀನ್ ಪಾರ್ಲಿಮೆಂಟ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಲ್ಕಿ-ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಮುಖ್ಯ ಅರಣ್ಯಾಧಿಕಾರಿ ಪ್ರಕಾಶ್ ನಟೇಕರ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ‌ ಅಧ್ಯಕ್ಷರಾದ ಡಾ.ಮೋಹನ್ ಆಳ್ವ, ಉಪ ಅರಣ್ಯಾಧಿಕಾರಿ ಪಿ ರುತ್ರನ್ ಸಹಿತ ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/10/2021 07:41 pm

Cinque Terre

1.89 K

Cinque Terre

0

ಸಂಬಂಧಿತ ಸುದ್ದಿ