ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕಂಪಾಡಿ:ಎಪಿಎಂಸಿ ಹಮಾಲಿಗಳಿಗೆ ಸರಕಾರದಿಂದ ವಸತಿ, ಜೀವ ವಿಮೆ ಸೌಲಭ್ಯ: ಕೃಷ್ಣರಾಜ ಹೆಗ್ಡೆ

ಬೈಕಂಪಾಡಿ: ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ನೀಡಿದ ಸುಮಾರು 100 ದಿನಸಿ ಕಿಟ್‍ಗಳನ್ನು ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ವಿತರಿಸಿದರು.

ರಾಜ್ಯದಲ್ಲಿ ಅಂದಾಜು 12 ವರ್ಗದ ಅಸಂಘಟಿತ ಕಾರ್ಮಿಕ ವಲಯವಿದ್ದು ಅವರಿಗೆ ನೆರವು ನೀಡಲಾಗುತ್ತದೆ. ಎಪಿಎಂಸಿಯಲ್ಲಿ ನೋಂದಾಯಿತ ಹಮಾಲಿಗಳಿಗೆ ಹಲವು ಸೌಲಭ್ಯವಿದ್ದು ಮಕ್ಕಳಿಗೆ ವಿದ್ಯಾರ್ಥಿ ವೇತನ,ಜೀವ ವಿಮೆ, ಮನೆ ಸೈಟ್ ನೀಡುವ ಮತ್ತಿತರ ಸರಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಮನಪಾ ಸದಸ್ಯ ವರುಣ್ ಚೌಟ, ಎಪಿಎಂಸಿ ಹಿರಿಯ ಸದಸ್ಯ ರಾಘವ ಶೆಟ್ಟಿ, ಸದಸ್ಯ ಪ್ರವೀಣ್ ಕುಮಾರ್,ಕಾರ್ಯದರ್ಶಿ ಸಿ.ಎಚ್ ಮೋಹನ್,ವರ್ತಕರ ಸಂಘದ ಅಧ್ಯಕ್ಷ ಭರತ್ ರಾಜ್,ಕಾರ್ಯದರ್ಶಿ ಇಮ್ತಿಯಾಝ್,ವರ್ತಕರು, ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/08/2021 03:58 pm

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ