ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಯುವಕರು ಸೈನ್ಯಕ್ಕೆ ಸೇರಿ ದೇಶ ರಕ್ಷಣೆ ಮಾಡಬೇಕು"

ಮುಲ್ಕಿ:“ಭಾರತಿ ಯೋಧರು ಧೈರ್ಯಶಾಲಿಗಳು ಸಾಹಸಿದೇಶ ಪ್ರೇಮಿಗಳು ಯುವಕರು ಸೈನ್ಯಕ್ಕೆ ಸೇರಿ ದೇಶ ರಕ್ಷಣೆ ಮಾಡಬೇಕು ಹಾಗೂ ಸೈನಿಕರಿಗೆ ಗೌರವ ನೀಡಬೇಕು" ಎಂದು ಸುಳ್ಯ ಅಖಿಲ ಕರ್ನಾಟಕ ಧ ಗ್ರಾ ಯೋಜನೆ ಜನಜಾಗೃತಿ ವೇದಿಕೆ ಯ ಸುರೇಶ್ ಕಣಿಮುರಡ್ಕ ಹೇಳಿದರು.ಅವರು ಮುಲ್ಕಿ ಲಯನ್ಸ್ ಕ್ಲಬ್ ವತಿಯಿಂದ ನಡೆದ ಮುಲ್ಕಿ ಸಮೀಪದ ತೋಕೂರು ರಾಮಕೃಷ್ಣ ಪೂಂಜಾ ತರಬೇತಿ ಸಂಸ್ಥೆಯಲ್ಲಿ "ಕಾರ್ಗಿಲ್ ವಿಜಯೋತ್ಸವದ ನೆನಪುಗಳು" ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು

ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶಾಂಭವಿ ಶೆಟ್ಟಿ ವಹಿಸಿ ಮಾತನಾಡಿ ದೇಶಭಕ್ತ ಯುವಕರು ಭಾರತೀಯ ಸೇನೆಗೆ ಸೇರಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಂ. ಆರ್ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಹರಿ ಎಚ್., ಶೇಖರ ಪೂಜಾರಿ, ಮುಲ್ಕಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಉದಯ ಅಮೀನ್ ಮಟ್ಟು, ವೆಂಕಟೇಶ್ ಹೆಬ್ಬಾರ್,ಪ್ರತಿಭಾ ಹೆಬ್ಬಾರ್ ಹಾಗೂ ಲಿಯೋ ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿಯೋಜಿತ ಅಧ್ಯಕ್ಷರಾದ ವಿನೋದ್ ಸಾಲ್ಯಾನ್‌ ಸ್ವಾಗತಿಸಿದರು ಮಂಜುನಾಥ್ ಧನ್ಯವಾದ ಅರ್ಪಿಸಿದರು, ಅಧ್ಯಾಪಕರಾದ ರಜನಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

31/07/2021 08:26 am

Cinque Terre

2.33 K

Cinque Terre

1

ಸಂಬಂಧಿತ ಸುದ್ದಿ