ಮುಲ್ಕಿ: ಗ್ರಾಮೀಣ ಕೃಷಿಕರ ಹಾಗೂ ಆರ್ಥಿಕ ದುರ್ಬಲರ ಶ್ರೇಯೋಭಿವೃದ್ಧಿಯನ್ನು ಪೂರೈಸಿಕೊಂಡು ಸಂಘವು ಸಾಮಾಜಿಕ ಆಭಿವೃದ್ಧಿಗೆ ಗಣನೀಯ ಸಹಕಾರ ನೀಡುವುದರೊಂದಿಗೆ ಸದಸ್ಯರಿಗೆ ಶೇ 18% ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಹೇಳಿದರು.
ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ಶ್ರೀ ನಾರಾಯಣ ಸನಿಲ್ ಸಭಾಗ್ರಹದಲ್ಲಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಲೆಕ್ಕ ಪರಿಶೋಧನಾ ವರದಿಯಲ್ಲಿ ರೂ 82ಲಕ್ಷ 8ಸಾವಿರದ 468 ಲಾಭ ಘೋಷಿಸಲಾಯಿತು. ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ನಿರ್ದೇಶಕರಾದ ವಿನೋದ್ ಕುಮಾರ್ ಬೊಳ್ಳೂರು, ಗೀತಾ ಆರ್.ಶೆಟ್ಟಿ, ಯೋಗೀಶ್ ಪಾವಂಜೆ, ಮೀರಾ ಬಾಯಿ.ಕೆ, ರೋಹಿಣಿ ಬಿ.ಶೆಟ್ಟಿ, ಅಶೋಕ್ ಬಂಗೇರ, ಮುಖೇಶ್ ಸುವರ್ಣ,ದಿವ್ಯಾ, ಶಂಕರ,ರಾಜೇಶ್ ಎಸ್.ದಾಸ್, ಬ್ಯಾಂಕ್ ಪ್ರತಿನಿಧಿ ಕಿರಣ್ ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಿಮಕರ್.ಟಿ.ಸುವರ್ಣ ಹಾಜರಿದ್ದರು.
Kshetra Samachara
28/08/2022 07:52 pm