ಮುಲ್ಕಿ: ಅನಾರೋಗ್ಯದಿಂದ ಬಳಲುತ್ತಿರುವ ಮುಲ್ಕಿ ಸಮೀಪದ ಅಂಗರಗುಡ್ಡೆ ನಿವಾಸಿ ರಂಗನಟ ರಾಜೇಶ್ ಕೆಂಚನಕೆರೆ ರವರಿಗೆ ಶ್ರೀರಾಮ ಭಜನಾ ಮಂಡಳಿ ಅಂಗರಗುಡ್ಡೆ ಹಾಗೂ ಶ್ರೀರಾಮ ಭಜನಾ ಮಂಡಳಿ ಮುಂಬೈ ಸಮಿತಿ ಮತ್ತು ದಾನಿಗಳ ಸಹಕಾರದಿಂದ ಸುಮಾರು 2.50 ಲಕ್ಷ ರೂಪಾಯಿ ನೀಡಲಾಯಿತು.
ಶ್ರೀರಾಮ ಭಜನಾ ಮಂಡಳಿ ಮುಂಬೈ ಸಮಿತಿಯ ಅಧ್ಯಕ್ಷ ಹಾಗೂ ಸಮಾಜಸೇವಕರಾದ ಜಿ.ಕೆ. ಕೆಂಚನಕೆರೆ ರವರು ಚೆಕ್ ನ್ನು ರಾಜೇಶ್ ಕೆಂಚನಕೆರೆ ರವರಿಗೆ ನೀಡಿದರು. ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಕೋಟ್ಯಾನ್, ಅತಿಕಾರಿ ಬೆಟ್ಟು ಗ್ರಾಪಂ ಸದಸ್ಯ ಕೃಷ್ಣ ಶೆಟ್ಟಿಗಾರ್, ಉಪಾಧ್ಯಕ್ಷ ಆನಂದ್ ಶೆಟ್ಟಿಗಾರ್, ಮಾಜಿ ಅಧ್ಯಕ್ಷ ಹರಿಕೃಷ್ಣ ದಾಸ್, ತಾರನಾಥ್ ದೇವಾಡಿಗ, ಅರ್ಚಕ ಪುರುಷೋತ್ತಮ್ ದಾಸ್, ಸಮಿತಿಯ ಸಂಪತ್ ಕುಮಾರ್, ಉಮೇಶ್ ಆಚಾರ್ಯ, ಜಯ ಸಾಲಿಯಾನ್, ನವೀನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
25/06/2022 08:01 am