ಮುಲ್ಕಿ: ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಎಂ. ಆರ್. ಪೂಂಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಪುಸ್ತಕ ವಿತರಿಸಿ ಟ್ರಸ್ಟ್ ನ ಆದಿತ್ಯ ಪೂಂಜಾ ಮಾತನಾಡಿ ಪುಸ್ತಕಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣದ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಿ ಎಂದು ಶುಭ ಹಾರೈಸಿದರು.
ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲ್ಯಾನ್ ಮಾತನಾಡಿ ಮುಲ್ಕಿ ಕಾಲೇಜಿನ ಇತಿಹಾಸ ಹಾಗೂ ದಾನಿ ರಾಮಕೃಷ್ಣ ಪೂಂಜಾ ರವರ ಕೊಡುಗೆಗಳನ್ನು ಸ್ಮರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಬೆಳ್ಳೆ,ಪ್ರೌಢ ಶಾಲಾ ವಿಭಾಗದ ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಟಿ ನಾಯಕ್, ಸಂಸ್ಕೃತ ಶಿಕ್ಷಕ ವಾಸುದೇವ ಭಾಗವತ , ಶಿಕ್ಷಕರಾದ ಗಂಗವ್ವ ಎಸ್ ಕೋಲಾರ್, ಆಶಾ ಬಿ. ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ವಾಣಿ ಧನ್ಯವಾದ ಅರ್ಪಿಸಿದರು ,ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.
Kshetra Samachara
10/06/2022 08:03 pm