ಸುರತ್ಕಲ್: ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ದಿಢೀರ್ ಭೇಟಿ ನೀಡಿ ಬುಧವಾರ ಅಧಿಕಾರಿಗಳ ,ಮಂಗಳೂರು ಮಹಾನಗರ ಪಾಲಿಕೆ ಸದಸ್ಯರ ಹಾಜರಾತಿ ಬಗ್ಗೆ ಪರಿಶೀಲನೆ ನಡೆಸಿದರು.
ಸುರತ್ಕಲ್ ನಲ್ಲಿ ವಲಯ ಅಧಿಕಾರಿಯೇ ಶಾಸಕರು ಭೇಟಿ ನೀಡಿದ ವೇಳೆ ಬಂದಿರಲಿಲ್ಲ.ವಿವಿಧ ಸೌಲಭ್ಯ ಕಲ್ಪಿಸುವ ಸರ್ವರ್ ಸಮಸ್ಯೆ ಹಾಗೂ ಸಿಬ್ಬಂದಿಗಳಿಗೆ ಸರಿಯಾಗಿ ಆಸ್ತಿ ತೆರಿಗೆ ,ಟ್ರೇಡ್ ಲೈಸೆನ್ಸ್ ವಿವರ ಬರೆಯುವಲ್ಲಿ ತಪ್ಪುಗಳಾಗುವ ಕಾರಣ ಮತ್ತಷ್ಟು ವಿಳಂಬ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ ,ಆಯುಕ್ತರ ಜತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು.
ಶಾಸಕರ ಜತೆಗೆ ಪ್ರಶಾಂತ್ ಮೂಡಾಯಿ ಕೋಡಿ, ವರುಣ್ ಚೌಟ,ದಿನಕರ್ ಇಡ್ಯಾ,ಪುಷ್ಪರಾಜ್ ಕಡಂಬೋಡಿ,ರಾಘವೇಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/06/2022 01:44 pm