ಮುಲ್ಕಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಶ್ರೀ ಜಾರಂದಾಯ ಧೂಮಾವತಿ ಬಂಟ ದೈವಸ್ಥಾನದಲ್ಲಿ ಜೀರ್ಣೋದ್ದಾರದ ಅಂಗವಾಗಿ ಶ್ರೀ ನರಹರಿ ತಂತ್ರಿಯವರ ಪೌರೋಹಿತ್ಯದಲ್ಲಿ ದುರ್ಗಾ ನಮಸ್ಕಾರ ಪೂಜೆ ನಡೆಯಿತು .
ಜೀರ್ಣೋದ್ದಾರ ದ ಕಾರ್ಯದಲ್ಲಿ ದಾನಿಗಳ ಸಹಕಾರ ಅಗತ್ಯ. ಒಗ್ಗಟ್ಟಿನಲ್ಲಿ ಕೂಡಿದರೆ ಎಲ್ಲವು ಸಾಧ್ಯ. ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಯಾವುದೇ ಅಡೆ ತಡೆವಿಲ್ಲದೆ ನಿರ್ವಿಘ್ನವಾಗಿ ನಡೆಯಲಿ ಎಂದು ಪೂಜೆ ನೆರವೇರಿಸಿ ಶ್ರೀ ನರಹರಿ ತಂತ್ರಿಯವರು ಆಶೀರ್ವಚನ ನೀಡಿದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು
Kshetra Samachara
28/05/2022 01:24 pm