ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ದಿ. ಟಿ. ಜಿ. ಭಂಡಾರಿ ಸ್ಮರಣಾರ್ಥ ದಾನಿಗಳಾದ ತೋಕೂರಿನ ಪುಷ್ಪ. ಕೆ ಮತ್ತು ಮಕ್ಕಳು, ಸ್ವಸ್ತಿಕಾ ರವರು 1,50, 000ರೂ ದೇವಳಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಮಧುಸೂದನ್ ಭಟ್ ವಿಶೇಷ ಪ್ರಾರ್ಥನೆ ಮಾಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದಾನಿಗಳ ಸಹಕಾರ ಶ್ಲಾಘನೀಯವಾಗಿದ್ದು ಕರಸೇವೆ ಮುಖಾಂತರ ಭಕ್ತರ ಕೈಂಕರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರಿದಾಸ ಭಟ್, ಪುರುಷೋತ್ತಮ ರಾವ್, ವಿಜಯ ಕುಮಾರ್ ರೈ ಮತ್ತು ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮೋಹನ್ ದಾಸ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/05/2022 08:51 pm