ಕಾವೂರು: ಮಂಗಳೂರು ನಗರ ಉತ್ತರದ ಕಾವೂರು ವಾರ್ಡ್ 18 ರಲ್ಲಿ ಸುಮಾರು 1.05 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ ವೈ.ಭರತ್ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್18 ಕಾವೂರು ವ್ಯಾಪ್ತಿಯ ಅಕಾಶಭವನ ಮುಖ್ಯ ರಸ್ತೆ ಕಾಂಕ್ರೀಟ್ ವಿಸ್ತರಣೆ ಕಾಮಗಾರಿಗೆ 1 ಕೋಟಿ ರೂಪಾಯಿ ವೆಚ್ಚದ ರಸ್ತೆ, ಮತ್ತು ಆಕಾಶಭವನ ಲಾಸ್ಟ್ ಸ್ಟಾಪ್ ನವೀನ್ ರವರ ಮನೆಯ ಹತ್ತಿರ 2.20 ಲಕ್ಷ ದ ನೂತನ ಚರಂಡಿ ಮತ್ತು ರಸ್ತೆ ಮತ್ತು ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಮರುಳು ಧೂಮಾವತಿ ದೈವಸ್ಥಾನದ ಭಂಡಾರ ಮನೆಯ ಹತ್ತಿರ ಮೆಟ್ಟಿಲು ವಿಸ್ತರಣೆ ಕಾಮಗಾರಿಗೆ 3 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್, ವಾರ್ಡಿನ ಮಂಡಲದ ಪ್ರಮುಖರು, ಮೋರ್ಚಾ, ಪ್ರಕೋಷ್ಠ ಪ್ರಮುಖರು, ಮಹಾಶಕ್ತಿ ಕೇಂದ್ರದ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಸಮಸ್ತ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
Kshetra Samachara
02/05/2022 12:40 pm