ಮುಚ್ಚೂರು ಕಾನ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮುಚ್ಚೂರು ಕಾನ ಶ್ರೀರಾಮ ದೇವಸ್ಥಾನದ ಬಳಿಯ 4 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು
ಗ್ರಾಮೀಣ ಪರಿಸರದಲ್ಲಿ ಜಲಕ್ರಾಂತಿ ಮೂಲಕ ಅದ್ವಿತೀಯ ಸಾಧನೆ ಮಾಡುತ್ತಿರುವ ಶಾಸಕ ಡಾ.ಭರತ್ ಶೆಟ್ಟಿಯವರ ಯೋಜನೆಗಳ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು
ನಾಗರಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ತಮಗೆ ಸಹಕರಿಸಿದ ಸಣ್ಣ ನೀರಾವರಿ ಇಲಾಖೆಯ ಸಚಿವರಿಗೆ ಪಶ್ಚಿಮ ವಾರಾಹಿ ಯೋಜನೆಯ ಅಧಿಕಾರಿಗಳಿಗೆ ಶಾಸಕರು ಕೃತಜ್ಞತೆ ಅರ್ಪಿಸಿದರು
ಶಾಸಕರೊಂದಿಗೆ ಗ್ರಾ.ಪಂ. ಉಪಾಧ್ಯಕ್ಷ ನಾರಾಯಣ ಎ. ಯಸ್ , ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ, ಗ್ರಾ.ಪಂ ಸದಸ್ಯ ವೀರಪ್ಪ ಗೌಡ, ಉದಯ್ ನಾಯ್ಕ್ ರೇಖಾ , ಎಡಪದವು ಗ್ರಾ.ಪಂ ಅಧ್ಯಕ್ಷರಾದ ಸುಕುಮಾರ್, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು, ಪಿಡಿಒ ಕು.ಜಲಜ ಟಿ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಸತೀಶ್ ಕುಮಾರ್ ಪಿ ವಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
06/03/2022 04:14 pm