ಮಂಗಳೂರು: ನಗರದ ಹೊರವಲಯದ ವಾರ್ಡ್ 18 ಕಾವೂರು ವ್ಯಾಪ್ತಿಯ ಮಂಜಲಕಟ್ಟೆ ಉಮೇಶ್ ಆಚಾರ್ಯ ಮನೆಯ ಬಳಿ ಮತ್ತು ಕೆ.ಆರ್.ಶೆಟ್ಟಿ ಮನೆಯ ಬಳಿ ಶಾಸಕರ ಅನುದಾನದಲ್ಲಿ 7.85 ಲಕ್ಷ ವೆಚ್ಚದ ತಡೆಗೋಡೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರ ನಿಧಿಯಿಂದ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ,4 ನೇಯ ಮೈಲು ಮುಲ್ಲಕಾಡು ಹಾಗೂ ಮುಲ್ಲಕಾಡು ಶಾಲೆಯ ಮೈದಾನಕ್ಕೆ ಒಟ್ಟು 3 ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಶಾಸಕ ಡಾ. ಭರತ್ ಶೆಟ್ಟಿ ನೆರವೇರಿಸಿದರು.
ಬಳಿಕ ಶಾಸಕರು ಕಾವೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಹಿಂದೂ ರುದ್ರ ಭೂಮಿ ಅಕಾಶಭವನ ದಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು .
ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್, ಬಿಜೆಪಿ ಮಂಡಲದ ಪ್ರಮುಖರು,ಮೋರ್ಚಾದ ,ಮಹಾಶಕ್ತಿ ಕೇಂದ್ರದ ,ಶಕ್ತಿ ಕೇಂದ್ರದ ,ವಾರ್ಡ್ ನ ಬೂತ್ ಅಧ್ಯಕ್ಷರು ,ಕಾರ್ಯದರ್ಶಿಗಳು,ವಾರ್ಡ್ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
Kshetra Samachara
02/03/2022 05:36 pm