ಮುಲ್ಕಿ:ಮುಲ್ಕಿಯ ಬಪ್ಪನಾಡು ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ಸುರತ್ಕಲ್ ಎನ್ಐಟಿಕೆ ತಾತ್ಕಾಲಿಕ ಟೋಲ್ ತೆರವು ಹೋರಾಟದ ಮುಂದಿನ ಸಿದ್ಧತೆಗಳ ಕುರಿತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಮಾನಮನಸ್ಕ ಸಂಘಟನೆಗಳ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಟೋಲ್ ವಿರೋಧಿ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಮಾರ್ಚ್ 15ರ ಟೋಲ್ ವಿರೋಧಿ ಪಾದಯಾತ್ರೆಯಲ್ಲಿ ತಾವು ಪಾಲ್ಗೊಳ್ಳುವುದಾಗಿ ತಿಳಿಸಿದರು.
ಡಿವೈಎಫ್ಐ ಘಟಕದ ರಾಜ್ಯಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ ಸುರತ್ಕಲ್ ಎನ್ಐಟಿಕೆ ಬಳಿಯ ಅವೈಜ್ಞಾನಿಕ ಟೋಲ್ ಗೇಟ್ ತಾತ್ಕಾಲಿಕ ಎಂದು ಕೇಂದ್ರ ಸರಕಾರ ಭರವಸೆ ನೀಡಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ, ಈ ಬಗ್ಗೆ ಹೋರಾಟ ನಡೆಸಿದವರನ್ನು ಹತ್ತಿಕ್ಕುವ ಹುನ್ನಾರ ಜಿಲ್ಲಾಡಳಿತ ನಡೆಸುತ್ತಿದೆ ಇದಕ್ಕಾಗಿ ಸಾಮೂಹಿಕ ಹೋರಾಟ ಅನಿವಾರ್ಯ ಎಂದು ಹೇಳಿ ಮಾರ್ಚ್15ರಂದು ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ನಿಂದ ಸುರತ್ಕಲ್ ಎನ್ಐಟಿಕೆ ಟೋಲ್ ವರೆಗೆ ಬೃಹತ್ ಪಾದಯಾತ್ರೆ ನಡೆಯುವುದಾಗಿ ತಿಳಿಸಿ ಎಲ್ಲಾ ಸಂಘಟನೆಗಳ ಬೆಂಬಲ ಕೋರಿದರು
ಮಂಗಳೂರಿನ ಮಾಜೀ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ ಸಂಸದ ನಳಿನ್ ಕುಮಾರ್ ಸುಳ್ಳು ಹೇಳುವ ವ್ಯಕ್ತಿಯಾಗಿದ್ದು ಯಾವುದೇ ಕಾರಣಕ್ಕೂ ನಂಬಬೇಡಿ ಅವರು ಬಣ್ಣ ಬದಲಾಯಿಸುವ ಗೋಸುಂಬೆ ಯಾಗಿದ್ದು ನಮ್ಮ ಹೋರಾಟ ಮುಂದುವರೆಯಬೇಕು ಎಂದರು
ಉಡುಪಿಯ ಅಮೃತ್ ಮಾತನಾಡಿ ಕಳೆದ ದಿನದ ಟೋಲ್ ವಿರುದ್ಧ ಹೋರಾಟ ನಡೆಸಿದ ಆಸಿಫ್ ಆಪದ್ಬಾಂಧವ ಕಾರ್ಯ ಪ್ರಶಂಸನೀಯ ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಬೇಕಾಗಿದೆ ಎಂದರು.
ಮುಲ್ಕಿ ತಾಲೂಕು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಪುತ್ರನ್ ಮಾತನಾಡಿ ಮುಂದಿನ ಮಾರ್ಚ್ 15ರ ಎನ್ಐಟಿಕೆ ಚಲೋ ಪಾದಯಾತ್ರೆ ಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಟೋಲ್ ವಿರೋಧಿ ಸಮಿತಿಯ ಎಂ. ಜೆ. ಹೆಗ್ದೆ, ದಿನೇಶ್ ಹೆಗ್ಡೆ ಉಳೆಪಾಡಿ, ಗೋಪಿನಾಥ ಪಡಂಗ, ದಿಲ್ರಾಜ್ ಆಳ್ವ, ಇಕ್ಬಾಲ್ ಅಹಮದ್, ಧನಂಜಯ ಮಟ್ಟು, ಮಧು ಆಚಾರ್ಯ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತಿತರರು ಮಾತನಾಡಿ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.ರಾಘವೇಂದ್ರರಾವ್ ಸುರತ್ಕಲ್ ನಿರೂಪಿಸಿದರು.
Kshetra Samachara
01/03/2022 10:53 pm