ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳಾಯಿಬೆಟ್ಟು:ಸಾರ್ವಜನಿಕ ಬಸ್ಸು ತಂಗುದಾಣ, ಪುಸ್ತಕ ಗೂಡು , ಮಾರ್ಗಸೂಚಿ ಫಲಕ ಅನಾವರಣ

ಉಳಾಯಿಬೆಟ್ಟು: ನಗರದ ಹೊರವಲಯದ ಪೆರ್ಮಂಕಿ ಉಳಾಯಿಬೆಟ್ಟು ಪ್ರೀತಿ ಗೇಮ್ಸ್ (ರಿ) ವತಿಯಿಂದ ಸಾರ್ವಜನಿಕ ಬಸ್ಸು ತಂಗುದಾಣ, ಪುಸ್ತಕ ಗೂಡು , ಮಾರ್ಗಸೂಚಿ ಫಲಕ, ಸಂಘದ ಮೊದಲ ಮಹಡಿಯ ಉದ್ಘಾಟನೆ ನಡೆಯಿತು.

39 ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶನೀಶ್ವರ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನಸಭಾ ಶಾಸಕ ಡಾ. ವೈ ಭರತ್ ಶೆಟ್ಟಿ, ಕೃಷ್ಣಪ್ರಕಾಶ್ ಉಳಿತ್ತಾಯ, ಪದ್ಮನಾಭ ಕೋಟ್ಯಾನ್, ಲತಾ ಜಗನ್ನಾಥ ಶೆಟ್ಟಿ, ಹರಿಕೇಶ ಶೆಟ್ಟಿ ,ಅಂತೋನಿ ಡಿಸೋಜ, ರತ್ನ ಸುರೇಶ,ಪದ್ಮನಾಭ ಶೆಟ್ಟಿ ,ಶೈಲೇಂದ್ರ ಸುವರ್ಣ, ಶಶಿಕಲಾ, ದಿನೇಶ್, ಜಾನ್ ಮೊರಸ್, ಗುಣಕರ ಸಾಲಿಯಾನ್, ಕಿರಣ್ ಪಕ್ಕಳ,ಅನಿತಾ ವಿ ಕ್ಯಾಥರೀನ್ , ರವಿರಾಜ್ ರಾವ್, ಪ್ರಶಾಂತ್ ಸಲ್ದಾನ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿವೇತನ, ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ರುಕ್ಮಯ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀನಾಥ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು

Edited By : PublicNext Desk
Kshetra Samachara

Kshetra Samachara

06/02/2022 06:10 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ