ನೀರ್ ಮಾರ್ಗ:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ ಪುನರಚನೆ ಕಾಮಗಾರಿಯಲ್ಲಿ 14 ಲಕ್ಷ ರೂಪಾಯಿ ಅನುದಾನದಲ್ಲಿ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಂಡಂತಿಲ ಬಿತ್ತಪಾದೆಯಿಂದ ಕಾಪೆಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು.
ಈ ಸಂದರ್ಭ ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಸಚಿನ್ ಹೆಗ್ಡೆ, ಶಕ್ತಿ ಕೇಂದ್ರ ಪ್ರಮುಖ್ ಯಶ್ವಿನ್ ಕುಂದರ್, ಬೂತ್ ಅಧ್ಯಕ್ಷರಾದ ನಾರಾಯಣ ಕಾಪೆಟ್ಟು ಗೋಪಾಲ ಪೂಜಾರಿ, ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕರಾದ ಗೋಕುಲ ದಾಸ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು
Kshetra Samachara
22/01/2022 06:43 am