ಮುಲ್ಕಿ: ಮಹಿಳೆಗೆ ಅವಕಾಶ ನೀಡಿದಲ್ಲಿ ಸಾಧನೆಯ ಶಿಖರ ಏರಬಲ್ಲಳು. ಇತ್ತೀಚಿಗಿನ ವರುಷಗಳಲ್ಲಿ ಮಹಿಳೆಯರು ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೂ ಅವರ ಸಾಧನೆ ಮೆಚ್ಚುವಂತಹದ್ದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಅವರು ಶ್ರೀ ಕ್ಷೇತ್ರ ಪಾವಂಜೆಯಲ್ಲಿ ನಡೆದ ಯಕ್ಷಧ್ರುವ ಪಟ್ಲ ಪೌಂಢಷನ್ ನ ಕೇಂದ್ರ ಮಹಿಳಾ ಘಟಕದ ಪಂಚಮ ವರ್ಷಾಚರಣೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಘಟಕದ ಸದಸ್ಯೆಯರಾದ ಅನೇಕ ಮಹಿಳಾ ಸಾಧಕಿಯರು ಕಳೆದ ಐದು ವರುಷಗಳಲ್ಲಿ ಫೌಂಡೇಶನ್ ನ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಸ್ಥೆಗೆ ಬಲವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಯಸ್ಸಿನ ಮಹಿಳಾ ಯಕ್ಷಗಾನ ಕಲಾವಿದೆ ಶ್ರೀಮತಿ ಸಾವಿತ್ರಿ ಎಸ್ ರಾವ್, ಪಾವಂಜೆ ಮೇಳದ ಹಿರಿಯ ಕಲಾವಿದರಾದ ದಿವಾಣ ಶಿವಶಂಕರ ಭಟ್ ಮತ್ತು ಬಾಲ ಯಕ್ಷಪ್ರತಿಭೆ ಆದಿ ಸ್ವರೂಪಳನ್ನು ಸಮ್ಮಾನಿಸಲಾಯಿತು.
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಗೌರವ ಪ್ರಶಸ್ತಿಯನ್ನು ಪಡೆದಿದ್ದ ಯಕ್ಷಗಾನ ಮಹಿಳಾ ಪ್ರತಿಭೆಗಳಾದ ಬಿಂದಿಯಾ ಎಲ್ ಶೆಟ್ಟಿ, ದೀಕ್ಷಾ ಎಂ.ಶೆಟ್ಟಿ ಹಾಗೂ ಕೃತಿ ವಿ ರಾವ್ ರವರನ್ನು ಗೌರವಿಸಿದರು.
ಮುಖ್ಯ ಅಭ್ಯಾಗತರಾಗಿ ಪವಿತ್ರ ಯು ಅಮೀನ್ ಕೂಳೂರು, ಕಾತ್ಯಾಯಿನೀ ಸೀತಾರಾಂ ರಾವ್, ಚಿತ್ರಾ ಜೆ ಶೆಟ್ಟಿ,, ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಉಪಸ್ಥಿತರಿದ್ದರು.
ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಕವಿ ಮುದ್ದಣ ವಿರಚಿತ "ಕುಮಾರ ವಿಜಯ" ಯಕ್ಷಗಾನ ಬಯಲಾಟ ಜರುಗಿತು.
Kshetra Samachara
20/01/2022 02:24 pm