ಮುಲ್ಕಿ: ನಮ್ಮ ಮಠ ಮಂದಿರಗಳು ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. ಅದನ್ನು ಉಳಿಸಿ ಬೆಳಸಿ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಪಂಜ ಮಹಾಗಣಪತಿ ಮಂದಿರ ದ ಅರ್ಚಕ ಸುರೇಶ್ ಭಟ್ ಹೇಳಿದರು.
ಅವರು ಪಂಜ ಕೊಯಿಕುಡೆ ಶ್ರೀ ವಿಠೋಬ ಭಜನಾ ಮಂದಿರದ ಮುಖ್ಯದ್ವಾರದ ಉದ್ಘಾಟನಾ ಸಮಾರಂಭದಲ್ಲಿ ಶುಭಾಶಂಶನೆಗೈದು ಮಾತನಾಡಿದರು.
ದ್ವಾರ ಕೊಡುಗೆ ನೀಡಿದ ಪಂಜ ಬಾಕಿಮಾರು ಗುತ್ತು ರಮೇಶ್ ಡಿ. ಶೆಟ್ಟಿ , ಅಮಿತ ಆರ್ ಶೆಟ್ಟಿ , ಮಂದಿರದ ಗೌರವಾಧ್ಯಕ್ಷ ಪಂಜದ ಗುತ್ತು ವಿಶ್ವನಾಥ ಶೆಟ್ಟಿ , ಅಧ್ಯಕ್ಷ ಸತೀಶ್ ಎಂ. ಶೆಟ್ಟಿ ಪಂಜ ಬೈಲಗುತ್ತು, ಸದಾನಂದ ಶೆಟ್ಟಿ , ದಯಾನಂದ ಶೆಟ್ಟಿ ಬಾಕಿಮಾರು ಗುತ್ತು, ಕರುಣಾಕರ ಶೆಟ್ಟಿ ಪಂಜದ ಗುತ್ತು, ಚಂದ್ರಹಾಸ ಎಂ. ಶೆಟ್ಟಿ ಪಂಜ ಮೊಗಪಾಡಿ, ಪದ್ಮನಾಭ ಪೂಜಾರಿ ಪಂಜ, ಸುಧಾಕರ ಪೂಂಜಾ, ಸುರೇಶ್ ದೇವಾಡಿಗ ಪಂಜ , ಭರತ್‌ರಾಜ್ ಪಂಜ, ಶ್ರೀಧರ ಪಂಜ, ಉದಯಕುಮಾರ್ ಶೆಟ್ಟಿ , ಕೇಶವ ಪೂಜಾರಿ ಪಂಜ, ಸೀತರಾಮ ಶೆಟ್ಟಿ ಮುಂಬಯಿ, ಸುಂದರ ಪುಜಾರಿ ಉಲ್ಯ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿರಿದ್ದರು.
Kshetra Samachara
15/01/2022 03:03 pm