ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಸಹಕಾರಿ ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಮುಖ್ಯ":ಗೋಪಿನಾಥ ಪಡಂಗ

ಮುಲ್ಕಿ: ಮುಲ್ಕಿ ವಿವಿದ್ದೋದೇಶ ಸಹಕಾರಿ ಸಂಘ (ನಿ) ಕ್ಷೀರಸಾಗರ ದ 2020-2 1ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಅವರು ಮಾತನಾಡಿ ನಷ್ಟದಲ್ಲಿರುವ ಸಹಕಾರಿ ಸಂಘ ಗ್ರಾಹಕರ ಸಹಕಾರದಿಂದ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ರೂಪಿಸುವ ಅಭಿವೃದ್ಧಿಪಥದತ್ತ ಸಾಗಬೇಕಾಗಿದೆ ಎಂದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಘದ ನಿರ್ದೇಶಕರುಗಳಾದ ಹರೀಂದ್ರ ಸುವರ್ಣ, ಲಿಡಿಯಾ ಫುಟಾಡೋ, ಸುಧಾಕರ ಶೆಟ್ಟಿ, ರಮೇಶ್ ಕೋಟ್ಯಾನ್, ಮೋಹನದಾಸ್, ಗುರುವ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುರಾಜ್ ಲೆಕ್ಕಪತ್ರ ಮಂಡಿಸಿದರು. ಹರೀಂದ್ರ ಸುವರ್ಣ ಧನ್ಯವಾದ ಅರ್ಪಿಸಿದರು.

Edited By : PublicNext Desk
Kshetra Samachara

Kshetra Samachara

24/12/2021 02:18 pm

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ